ಅಮೆರಿಕದಿಂದ ಚೀನಾಗೆ ಮತ್ತೊಂದು ಶಾಕ್​:1000 ಚೀನಾ ವೀಸಾ ರದ್ದು

ಡ್ರ್ಯಾಗನ್​ ರಾಷ್ಟ್ರ ಚೀನಾಗೆ ಅಮೆರಿಕ ದೊಡ್ಡ ಶಾಕ್​ ನೀಡಿದ್ದು 1000 ಚೀನಾ ನಾಗರಿಕರ ವೀಸಾವನ್ನ ರದ್ದು ಮಾಡಿದೆ.

Karnataka TV Contact


ರಾಷ್ಟ್ರದ ಭದ್ರತೆಯ ಕಾರಣವೊಡ್ಡಿರೋ ಅಮೆರಿಕ, ರಾಷ್ಟ್ರಕ್ಕೆ ಎಂಟ್ರಿ ಕೊಟ್ಟಿರೋ 1000 ಚೀನಿ ವಿದ್ಯಾರ್ಥಿಗಳು ಹಾಗೂ ರಿಸಚರ್ಸ್​ ವೀಸಾಗಳನ್ನ ರದ್ದುಗೊಳಿಸಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಚೀನಾ ಗೃಹ ಸಚಿವಾಲಯದ ಅದ್ಯಕ್ಷ ಚಾಡ್ ವೋಲ್ಫ್​ ಅಮೆರಿಕಕ್ಕೆ ಎಂಟ್ರಿ ಕೊಟ್ಟಿರೋ ಚೀನಾ ವಿದ್ಯಾರ್ಥಿಗಳು ಹಾಗೂ ರಿಸಚರ್ಸ್​ಗಳಲ್ಲಿ ಕೆಲವರು ಚೀನಾ ಸೇನೆ ಜೊತೆ ಲಿಂಕ್​ ಹೊಂದಿದ್ದಾರೆ ಎಂಬ ಮಾಹಿತಿ ಇದೆ. ಹಾಗೂ ಇವರು ದೇಶದ ಮಾಹಿತಿಯನ್ನ ಚೀನಾಗೆ ನೀಡ್ತಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಈ ಕ್ರಮ ಕೈಗೊಂಡಿದ್ದೇವೆ ಅಂತಾ ಹೇಳಿದ್ರು.

About The Author