Political News: ಸಿನಿಮಾ ನಟರು ನಟಿಸುವ ಸಿಗರೇಟ್ ಆ್ಯಡ್ ನೋಡಿ, ಯುವ ಪೀಳಿಗೆಯವರು ದಾರಿ ತಪ್ಪಬಾರದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಕರೆ ನೀಡಿದ್ದಾರೆ.
ಬೆಂಗಳೂರಿನ ಆರೋಗ್ಯ ಸೌಧದಲ್ಲಿ ನಡೆದ ತಂಬಾಕು ಮುಕ್ತ ಯುವ ಅಭಿಯಾನ 4.o ಕಾರ್ಯಕ್ರಮದಲ್ಲಿ ಮಾತನಾಡಿರುವ ಖಾದರ್, ಇಂಥ ಸಿನಿ ಸೆಲೆಬ್ರಿಟಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸಿನಿಮಾ, ಸಿರಿಯಲ್ಗಳಲ್ಲಿ ನಟರು ಕೇವಲ ಸಿಗರೇಟ್ ಹಿಡಿದು ಪೋಸ್ ನೀಡುತ್ತಾರೆ. ನಿಜವಾಗಿಯೂ ಅವರು ಸ್ಮೋಕ್ ಮಾಡುವುದಿಲ್ಲ. ಹಾಗಾಗಿ ಅಂಥ ಸೀನ್ ನೋಡಿ ಯುವ ಜನತೆ ಹಾಳಾಗಬಾರದು. ದಾರಿ ತಪ್ಪಬಾರದು ಎಂದು ಸಚಿವ ಖಾದರ್ ಯುವ ಜನತೆಗೆ ಕರೆ ನೀಡಿದ್ದಾರೆ.
ಅಲ್ಲದೇ ಅವರು ಪೋಸ್ ನೀಡಿದರೆಂದು ನೀವು ಸಿಗರೇಟ್ ಸೇದಿ ಪೋಸ್ ನೀಡಲು ಪ್ರಾರಂಭಿಸಿದರೆ, ಆಸ್ಪತ್ರೆ ಮೆಟ್ಟಿಲೇರಬೇಕಾಗುತ್ತದೆ. ಐಸಿಯು ಸೇರಬೇಕಾಗುತ್ತದೆ. ಇಂಥ ವಿಚಾರದಲ್ಲಿ ಸಿನಿಮಾ ನಟರನ್ನು ಎಂದಿಗೂ ಮಾದರಿಯನ್ನಾಗಿ ತೆಗೆದುಕ“ಳ್ಳಬೇಡಿ ಎಂದು ಯು.ಟಿ.ಖಾದರ್ ಹೇಳಿದ್ದಾರೆ.
ಬಳಿಕ ಮಾಧ್ಯಮದ ಬಳಿ ಮಾತನಾಡಿರುವ ಸಚಿವ ಖಾದರ್, ನಾನು ಯಾವುದೇ ನಿರ್ದಿಷ್ಟ ಸಿನಿಮಾ ನಟರ ಬಗ್ಗೆ ಮಾತನಾಡಿಲ್ಲ. ಇಲ್ಲಿನ ಯಾವ ನಟರು ಆ ರೀತಿ ಮಾಡುತ್ತಿಲ್ಲ. ಆದರೆ ಹಿಂದಿ-ಇಂಗ್ಲೀಷ್ ಸಿನಿಮಾಗಳಲ್ಲಿ ಧೂಮಪಾನ, ಮಧ್ಯಪಾನ ಮಾಡುವ ದೃಷ್ಯಗಳು ಸರ್ವೇಸಾಮಾನ್ಯವಾಗಿ ಕಂಡು ಬರುತ್ತದೆ. ಅದನ್ನೇ ಮಾದರಿಯಾಗಿ ತೆಗೆದುಕ“ಂಡು ಯುವ ಪೀಳಿಗೆಯವರು ಜೀವನ ಹಾಳು ಮಾಡಿಕ“ಂಡರೆ ಮುಂದೆ ಅವರ ಮನೆಯವರಿಗೆ ಯಾರು ಗತಿ.. ಯುವ ಜನತೆ ಹಾಳಾಗಬಾರದು ಎಂಬುದಷ್ಟೇ ನನ್ನ ಕಾಳಜಿ ಎಂದು ಖಾದರ್ ಸ್ಪಷ್ಟನೆ ನೀಡಿದ್ದಾರೆ.




