Political News: ಕೆಲ ದಿನಗಳ ಹಿಂದೆ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಾಪ್ ಸಿಂಹ ಪ್ರಚೋದನಕಾರಿ ಭಾಷಣ ಮಾಡಿದ್ದರೆಂದು ಆರೋಪಿಸಿ, ಅವರ ವಿರುದ್ಧ ಎಫಐಆರ್ ದಾಖಲಿಸಲಾಗಿತ್ತು. ಇದೀಗ ಮತ್ತೆ ಎಫ್ಐಆರ್ ದಾಖಲಿಸಲಾಗಿದ್ದು, ಪ್ರತಾಾಪ್ ಸಿಂಹ ವಿರುದ್ಧ ಜಾತಿ ನಿಂದನೆ ಆರೋಪ ಮಾಡಲಾಗಿದೆ.
ಇನ್ಸ್ಪೆಕ್ಟರ್ ಧನಂಜಯ್ ಅವರಿಗೆ ಜಾತಿ ನಿಂದನೆ ಆರೋಪ ಮಾಡಿದ್ದಾರೆಂದು ಆರೋಪಿಸಿ, ಟಿ.ನರಸೀಪುರ ಸ್ಟೇಶನ್ನಲ್ಲಿ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮಧು ಎಂಬುವವರು ಪ್ರತಾಪ್ ವಿರುದ್ಧ ದೂರು ನೀಡಿದ್ದು, ಧನಂಜಯ್ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ ಅವರ ಜಾತಿ ಹೆಸರು ಹೇಳಿ ಅವಹೇಳನ ಮಾಡಿದ್ದಾರೆಂದು ಮಧು ತಾವು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆಗಿದ್ದೇನು..?
ಟಿ.ನರಸೀಪುರದಲ್ಲಿ ಗಣೇಶ ವಿಸರ್ಜನೆ ವೇಳೆ ಮಸೀದಿ ಮುಂದೆ ಡಿಜೆ ಹಾಕಿದ್ರೆ, ಪಟಾಕಿ ಸಿಡಿಸಿದ್ರೆ, ಗ್ರಹಚಾರ ಬಿಡಿಸ್ತೀನಿ ಎಂದು ಕೆಲವು ಹಿಂದೂಗಳನ್ನು ಸ್ಟೇಶನ್ಗೆ ಕರೆದು ಇನ್ಸ್ಪೆಕ್ಟರ್ ಧನಂಜಯ್ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಪ್ರತಾಪ್ ಸಿಂಹ ಸೇರಿ ಹಲವು ಬಿಜೆಪಿ ನಾಯಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೇ, ಗಣೇಶ ವಿಸರ್ಜನೆ ಮಾಡೇ ಮಾಡ್ತೀವಿ ಎಂದು ಪ್ರತಾಪ್ ಸಿಂಹ ಧನಂಜಯ್ ವಿರುದ್ಧ ಸವಾಲ್ ಹಾಕಿದ್ದರು. ಬಳಿಕ ಕಾರ್ಯಕ್ರಮದ ವೇಳೆ ಪ್ರತಾಪ್ ಸಿಂಹ ಧನಂಜಯ್ ವಿರುದ್ಧ ವಾಗ್ದಾಳಿ ನಡೆಸಿ ಭಾಷಣ ಮಾಡಿದ್ದರು. ಈ ಕಾರಣಕ್ಕೆ ಪ್ರತಾಪ್ ಮೇಲೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ, ಎಫ್ಐಆರ್ ದಾಖಲಿಸಲಾಗಿತ್ತು. ಇದೀಗ ಜಾತಿ ನಿಂದನೆ ಆರೋಪ ಮಾಡಿ ಮತ್ತೆ ಎಫ್ಐಆರ್ ದಾಖಲಿಸಲಾಗಿದೆ.




