ಘೋಷಣೆಗಳಲ್ಲಿ ನಂಬರ್ 1, ಅನುಷ್ಠಾನದಲ್ಲಿ ಶೂನ್ಯ!: ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆರ್.ಅಶೋಕ್ ಕಿಡಿ

Political News: ರಾಜ್ಯದ ಹಲವು ತಾಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ದಿನಗಳೆದರೂ ಇನ್ನು ಕೂಡ ತಾಲೂಕಳಿಗೆ ಸಿಗಬೇಕಾದ ತಲಾ 1 ಕೋಟಿ ರೂಪಾಯಿ ಪರಿಹಾರ ಸಿಗಲಿಲ್ಲವೆಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು, ಘೋಷಣೆಗಳಲ್ಲಿ ನಂಬರ್ 1, ಅನುಷ್ಠಾನದಲ್ಲಿ ಶೂನ್ಯ ಎಂದು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಭೀಕರ ಅಭಾವ ಆವರಿಸಿದ್ದು, ಕುಡಿಯುವ ನೀರಿಗಾಗಿ ಜನ-ಜಾನುವಾರುಗಳು ಕಣ್ಣೀರು ಹಾಕುತ್ತಿವೆ! 109 ತಾಲೂಕುಗಳ 799 ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದ್ದರೂ, ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ಮಾತ್ರ ನಿದ್ರಾವಸ್ಥೆಯಲ್ಲಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಪ್ರತಿ ಗ್ರಾಮೀಣ ಕ್ಷೇತ್ರಕ್ಕೆ ತುರ್ತು ಕುಡಿಯುವ ನೀರಿನ ಕಾಮಗಾರಿಗಾಗಿ ತಲಾ ₹1 ಕೋಟಿಯಂತೆ ಒಟ್ಟು ₹189 ಕೋಟಿ ಹಂಚಿಕೆ ಮಾಡಿದ್ದೇವೆ ಎಂದು ಜುಲೈ 31ರಂದೇ ಡಂಗುರ ಸಾರಿದ್ದೀರಿ. ಆದರೆ ಸೆಪ್ಟೆಂಬರ್ ಮುಗಿಯುತ್ತ ಬಂದರೂ ತಾಲ್ಲೂಕುಗಳಿಗೆ ಇನ್ನೂ ₹1 ಬಿಡಿಗಾಸೂ ತಲುಪಿಲ್ಲ! ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ನಿಮ್ಮ ಗ್ಯಾರಂಟಿ ಸರ್ಕಾರದ ‘ಖಾಲಿ ಹಸ್ತ’ದ ಅಸಲಿ ಮುಖ! ಹಂಚಿಕೆ ಮಾಡಿದ್ದು: ₹306 ಕೋಟಿ ಬಿಡುಗಡೆ ಮಾಡಿದ್ದು: ಕೇವಲ ₹117 ಕೋಟಿ ಖರ್ಚು ಮಾಡಿದ್ದು: ಬರೀ ₹68.51 ಕೋಟಿ!

ಶಾಸಕರ ಕ್ಷೇತ್ರದ ನಿಧಿ ತಡೆದು, ಜನರ ಗಂಟಲು ಒಣಗಿಸಿಸುತ್ತಿದ್ದೀರಿ? ತುರ್ತು ಕುಡಿಯುವ ನೀರಿನ ಕಾಮಗಾರಿಗಳ ಹಣ ಎಲ್ಲಿದೆ? ಸರ್ಕಾರದ ಬೊಕ್ಕಸ ಖಾಲಿಯಾಗಿದೆಯೇ ಅಥವಾ ನಿಮ್ಮ ಪರ್ಸಂಟೇಜ್ ಕಮಿಷನ್ ವ್ಯವಹಾರ ಇನ್ನು ಮುಗಿದಿಲ್ಲವೇ? ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದ್ದರೂ, ಸರ್ಕಾರ ಮಾತ್ರ ಕೇವಲ ಸಮೀಕ್ಷೆ, ಮಾನದಂಡ ಮತ್ತು ಸಭೆಗಳ ಹೆಸರಿನಲ್ಲಿ ಕಾಲಹರಣ ಮಾಡುತ್ತಿದೆ ಎಂದು ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿಗಳೇ, ಸಬೂಬುಗಳನ್ನು ನೀಡುವುದನ್ನು ಬಿಟ್ಟು ಕೂಡಲೇ ಘೋಷಿಸಿದ ₹1 ಕೋಟಿಯನ್ನು ತಕ್ಷಣವೇ ಎಲ್ಲಾ ತಾಲ್ಲೂಕುಗಳಿಗೆ ಬಿಡುಗಡೆ ಮಾಡಿ, ಯುದ್ಧೋಪಾದಿಯಲ್ಲಿ ಕುಡಿಯುವ ನೀರಿನ ಕೆಲಸಗಳನ್ನು ಪ್ರಾರಂಭಿಸಬೇಕು. ಇಲ್ಲವಾದರೆ ಬಾಯಾರಿದ ಜನರ ಪರವಾಗಿ ಪ್ರತಿ ತಾಲೂಕಿನಲ್ಲೂ ಬೀದಿಗಿಳಿದು ಹೋರಾಟ ನಡೆಸಿ ನಿಮ್ಮ ಕುಂಭಕರ್ಣ ಸರ್ಕಾರದ ನಿದ್ದೆ ಕೆಡಿಸುವುದು ನಿಶ್ಚಿತ! ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

About The Author