Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ನಿಖಿಲ್ ಕುಮಾರ್ ಬಗ್ಗೆ ಕಿಡಿಕಾರಿದ್ದಾರೆ.
ನಮ್ಮ ಸಾಹೇಬ್ರು 1 ಮಾತು ಹೇಳಿದ್ರೆ ಸಾಕು ರಾಜ್ಯದಲ್ಲಿ 1 ಕಡೆಯೂ ಭಾಷಣ ಮಾಡಲು ಕೂಡ ನಾವು ಬಿಡುವುದಿಲ್ಲವೆಂದು ಜೆಡಿಎಸ್ ನಾಯಕರಿಗೆ ನಲಪಾಡ್ ಸವಾಲ್ ಹಾಕಿದ್ದಾರೆ.
ಅಲ್ಲದೇ, ಕುಮಾರಸ್ವಾಮಿ ಅವರ ಬಗ್ಗೆ ನಾನು ತಪ್ಪಾಗಿ ಮಾತಾಡಿದ್ರೆ, ಹೌದು ನಾನು ತಪ್ಪು ಮಾಡಿದ್ದೇನೆ, ನನಗೆ ಅವರ ಬಗ್ಗೆ ಮಾತನಾಡಲು ಅರ್ಹತೆ ಇಲ್ಲ ಎಂದು ನಾನು ಹೇಳಬಲ್ಲೆ. ಆದರೆ ನಾನು ನಿಖಿಲ್ ಸೇಮ್. ನಾವಿಬ್ಬರೂ ಇನ್ನೂ ವಿಧಾನಸೌಧದ“ಳಗೆ ಹೋಗಲೇ ಇಲ್ಲ.
ಅಲ್ಲದೇ ನಿಖಿಲ್ ಕುಮಾರ್ ದೇವೇಗೌಡರ ಮನೆಯಲ್ಲಿ ಜನಿಸಿದ್ದಷ್ಟೇ ಬಿಟ್ಟರೆ ಅವನಿಗೆ ಯಾವ ರಾಜಕೀಯ ಅರ್ಹತೆಯೂ ಇಲ್ಲ. ನನಗೂ ಅವನಿಗೂ ಸೇಮ್ ವಯಸ್ಸು. ಆದರೆ ನಮ್ಮ ವಯಸ್ಸಿಗಿಂತ ಹೆಚ್ಚು ಡಿ.ಕೆ.ಶಿವಕುಮಾರ್ ಸಾಹೇಬ್ರ ಎಕ್ಸ್ಪಿರಿಯನ್ಸ್ ಇದೆ. ಹಾಗಾಗಿ ಸಾಹೇಬ್ರ ಬಗ್ಗೆ ಮಾತನಾಡೋಕ್ಕೆ ಅವನು ಯಾರು ಎಂದು ನಲಪಾಡ್ ಪ್ರಶ್ನಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




