Bollywood: 65 ಕೋಟಿ ರೂ. ಹಗರಣ: ಜೂಲಿ ಸಿನಿಮಾ ಖ್ಯಾತಿಯ ನಟ ಡಿನೋ ಮೋರಿಯಾ ಬಂಧನ

Bollywood: ಡಿನೋ ಮೋರಿಯಾ.. ಹಲವು ವರ್ಷಗಳ ಹಿಂದೆ ಕನ್ನಡದಲ್ಲಿ ರಿಲೀಸ್ ಆಗಿದ್ದ ಜೂಲಿ ಸಿನಿಮಾಜಲ್ಲಿ ಮೋಹಕ ತಾರೆ ರಮ್ಯಾ ಜತೆ ಬಣ್ಣ ಹಚ್ಚಿದ್ದ ನಟ. ಅದಾದ ಬಳಿಕ ಬಾಲಿವುಡ್‌ನಲ್ಲಿ ಬೆರಳೆಣಿಕೆಯಷ್ಟು ಸಿನಿಮಾ ಮಾಡಿ, ಸಿನಿಮಾ ಲೋಕದಿಂದ ಡಿನೋ ದೂರವಾಗಿದ್ದರು. ಕಳೆದ ವರ್ಷ ಅಕ್ಷಯ್ ಕುಮಾರ್ ನಟನೆಯ ಹೌಸ್‌ಫುಲ್ 5ನಲ್ಲಿ ಡಿನೋ ನಟಿಸಿದ್ದರು. ಆದರೆ ಇದೀಗ ಡಿನೋ ಮತ್ತೆ ಸುದ್ದಿಯಲ್ಲಿದ್ದಾರೆ.

65 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಡಿನೋ ಮನೆ ಮೇಲೆ ಪೋಲೀಸರು ದಾಳಿ ನಡೆಸಿ, ವಿಚಾರಣೆ ನಡೆಸಿದ್ದಾರೆ. ಸತತ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ, ಡಿನೋ ಮೋರಿಯಾನನ್ನು ಪೋಲೀರು ಬಂಧಿಸಿದ್ದಾರೆ.

ಮುಂಬೈನ ಮಿಥಿ ನದಿಯ ಹೂಳು ತೆಗೆಯುವ ಮತ್ತು ನವೀಕರಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಡಿನೋ ಮೋರಿಯಾ ಭಾಗಿಯಾಗಿದ್ದಾರೆಂಬ ಆರೋಪವಿತ್ತು. ಈ ಕಾರಣಕ್ಕೆ ಮನೆಗೆ ದಾಳಿ ನಡೆಸಿ, ವಿಚಾರಣೆ ಬಳಿಕ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಡಿನೋವನ್ನು ಬಂಧಿಸಲಾಗಿದೆ.

ನದಿ ಸ್ವಚ್ಛತಾ ಕಾರ್ಯದ ಗುತ್ತಿಗೆಗಳ ಹಂಚಿಕೆ ಅದಕ್ಕೆ ಸಂಬಂಧಿಸಿದ ಹಣಕಾಸಿನ ಪಾವತಿಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮುಂಬೈ ಪೋಲೀಸರು ಕೂಲಂಕುಶವಾಗಿ ತನಿಖೆ ನಡೆಸಿದ್ದಾರೆ.

About The Author