Health Tips: ನವಜಾತ ಶಿಶುವನ್ನು ವಸ್ತ್ರದಲ್ಲಿ ಏಕೆ ಸುತ್ತುತ್ತಾರೆ..? ಇದರಿಂದ ಏನು ಪ್ರಯೋಜನ..?

Health Tips: ಮಕ್ಕಳು ಜನಿಸಿದ 6 ತಿಂಗಳಾಗುವವರೆಗಾದರೂ ಮಕ್ಕಳನ್ನು ವಸ್ತ್ರದಲ್ಲಿ ಸುತ್ತುತ್ತಾರೆ. ಸ್ನಾನ ಮಾಡಿಸುವಾಗ ಅಥವಾ ಮಗುವಿನ ವಸ್ತ್ರ ಬದಲಾಯಿಸಲು ಮಾತ್ರ ವಸ್ತ್ರ ತೆಗೆಯಲಾಗುತ್ತದೆ. ಬಳಿಕ ಮತ್ತೆ ಅದೇ ರೀತಿ ವಸ್ತ್ರವನ್ನು ಸುತ್ತಲಾಗುತ್ತದೆ. ಹಾಗಾದ್ರೆ ಯಾಕೆ ನವಜಾತ ಶಿಶುವನ್ನು ವಸ್ತ್ರದಲ್ಲಿ ಸುತ್ತುತ್ತಾರೆ..? ಈ ಬಗ್ಗೆ ತಿಳಿಯೋಣ ಬನ್ನಿ..

ಮಗು 9 ತಿಂಗಳು ತಾಯಿಯ ಗರ್ಭದಲ್ಲಿರುತ್ತದೆ. ಆಗ ಅದಕ್ಕೆ ಬೆಚ್ಚಗಿನ ಅನುಭವವಾಗಿರುತ್ತದೆ. ಆಚೆ ಬಂದ ಬಳಿಕ, ಬೆಳಕನ್ನು ಕಂಡ ಮಗುವಿಗೆ ಹೆದರಿಕೆಯಾಗಿ ಅಳಲು ಪ್ರಾರಂಭಿಸುತ್ತದೆ. ಅದಕ್ಕಾಗಿ ಮಗು ಜನಿಸಿದ ತಕ್ಷಣ, ತಾಯಿಯ ಎದೆಯ ಬಳಿ ಮಗುವನ್ನು ಇರಿಸಲಾಗುತ್ತದೆ. ಆಗ ಆ ಹೃದಯಬಡಿತದಿಂದ ಮಗು ತನ್ನ ತಾಯಿಯ ಸ್ಪರ್ಶ ಅರಿಯುತ್ತದೆ.

ಇನ್ನು ಮಗುವನ್ನು ಗರ್ಭದಲ್ಲಿರುವಂತೆ ಸ್ಪರ್ಶವಾಗಿರಿಸಲು ಈ ರೀತಿ ವಸ್ತ್ರ ಸುತ್ತಲಾಗುತ್ತದೆ. ಮುಖ ಬಿಟ್ಟು ಉಳಿದೆಲ್ಲ ದೇಹದ ಭಾಗಗಳನ್ನು ಕವರ್ ಮಾಡುವನ್ನು ವಸ್ತ್ರ ಕಟ್ಟುತ್ತಾರೆ. ಇದರಿಂದ ಮಗುವಿಗೆ ಚೆನ್ನಾಗಿ ನಿದ್ರೆ ಬರುತ್ತದೆ.

ಅಲ್ಲದೇ ಶಿಶುಗಳ ಬೇಗ ಗಾಬರಿಯಾಗುತ್ತದೆ. ಹಾಗೆ ಗಾಬರಿಯಾದಾಗ, ಕೈ ಕಾಲು ಅಲ್ಲಾಡಿಸುತ್ತದೆ. ಆಗ ಶಿಶುವನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಮಗುವನ್ನು ವಸ್ತ್ರದಲ್ಲಿ ಸುತ್ತಲಾಗುತ್ತದೆ.

ಅಲ್ಲದೇ ಮಗುವಿನ ಕೈ ಕಾಲು ದೇಹ ಎಲ್ಲ ಸ್ಥಿರವಾಗಿರಬೇಕು ಅಂದ್ರೆ ಈ ರೀತಿ ಶಿಶುವಿದ್ದಾಗಿಂದಲೇ ವಸ್ತ್ರ ಸುತ್ತಬೇಕು. ಆದರೆ ವಸ್ತ್ರ ಸುತ್ತುವ ಭರದಲ್ಲಿ ನಾವು ಕೆಲವು ಅಂಶಗಳನ್ನು ಎಂದಿಗೂ ಮರೆಯಬಾರದು. ಅದೇನೆಂದರೆ, ಮಗುವಿನ ಉಸಿರುಗಟ್ಟುವಷ್ಟು ಬಿಗಿಯಾಗಿ ವಸ್ತ್ರ ಸುತ್ತಬಾರದು. ವಸ್ತ್ರ ಸುತ್ತಿದರೂ ಮಗು ಅಳದೇ, ಸಮಾಧಾನವಾಗಿ ಇರಬೇಕು. ಇದನ್ನೆಲ್ಲ ಗಮನಿಸಿ ವಸ್ತ್ರ ಸುತ್ತಬೇಕು.

About The Author