Horoscope: ಈ ರಾಶಿಯವರು ಜಗಳವಾಡುವುದರಲ್ಲಿ ನಿಸ್ಸೀಮರು.. ನಿಮ್ಮ ರಾಶಿಯೂ ಇರಬಹುದು ನೋಡಿ..

Horoscope: ಕೆಲವು ರಾಶಿಯವರಿಗೆ ಬೇರೆ ಬೇರೆ ರೀತಿಯ ಗುಣ, ಅಭ್ಯಾಸ ಇರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರು ಜಗಳವಾಡುವುದರಲ್ಲಿ, ಮಿಸ್ ಅಂಡರ್ಸ್ಟ್ಯಾಂಡಿಂಗ್ ಮಾಡಿಕ“ಳ್ಳುವುದರಲ್ಲಿ ನಿಸ್ಸೀಮರು ಅಂತಾ ಹೇಳಲಿದ್ದೇವೆ.

ಮೇಷ: ಮೇಷ ರಾಶಿಯ ಅಧಿಪತಿ ಮಂಗಳ. ಮತ್ತು ಮಂಗಳ ಯುದ್ದಪ್ರಿಯ. ಆದರೆ ಮೇಷ ರಾಶಿಯವರು ಹೆಚ್ಚು ತಾಳ್ಮೆಯಿಂದ ಇರುತ್ತಾರೆ. ಆದರೆ ತಾಳ್ಮೆಗೆಟ್ಟರೆ, ಇವರನ್ನು ಯಾರೂ ಹಿಡಿಯಲು ಸಾಧ್ಯವಿಲ್ಲ. ಆದರೆ ಇವರನ್ನು ಯಾರಾದರೂ ಕೆಣಕಿದರೆ ಮತ್ತು ಸವಾಲ್ ಹಾಕಿದರೆ, ಅಂಥವರನ್ನು ಮೇಷ ರಾಶಿಯವರು ಸೋಲಿಸದೇ ಬಿಡುವವರಲ್ಲ.

ಮಿಥುನ: ಮಿಥುನ ರಾಶಿಯವರಿಗೆ ಇರುವಷ್ಟು ಕಾಳಜಿಯುಕ್ತ ಮನಸ್ಸು ಬೇರೆ ರಾಶಿಯವರಿಗಿಲ್ಲ. ಇವರು ಪ್ರೀತಿ ಹಂಚಲು ಇಚ್ಛಿಸುವ ರಾಶಿಯವರು. ಆದರೆ ಇವರಿಗೆ ಕೋಪ ಬಂದರೆ, ಇವರು ಮಾತಿನಲ್ಲೇ ನಿಮ್ಮ ಬೆವರಿಳಿಸುತ್ತಾರೆ.

ವೃಶ್ಚಿಕ: ವೃಶ್ಚಿಕ ರಾಶಿಯವರು ಶಾಂತ ಸ್ವಭಾವ ಮತ್ತು ಗಂಭೀರವಾಗಿರುವವರು. ಆದರೆ ಇವರನ್ನು ಯಾರಾದರೂ ಕೆಣಕಿದರೆ, ಅಥವಾ ದುರ್ಬುದ್ಧಿ ತೋರಿಸಿದ್ದಲ್ಲಿ, ಅಂಥವರಿಗೆ ತಕ್ಕ ಉತ್ತರ ನೀಡುತ್ತಾರೆ.

ಧನು: ಧನು ರಾಶಿಯವರು ನೇರ ಸ್ವಭಾವದವರು. ಎದುರಿನವರು ತಪ್ಪು ಮಾಡಿದರೆ, ಅದನ್ನು ತಪ್ಪು ಎಂದು ನೇರವಾಗಿ ಹೇಳುತ್ತಾರೆ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ತಪ್ಪುಗಳನ್ನು ಇವರು ಎಂದಿಗೂ ಸಹಿಸುವುದಿಲ್ಲ. ಅಲ್ಲದೇ, ಇವರಿಗೆ ಬಹು ಬೇಗ ಕೋಪ ಬರುತ್ತದೆ. ಮತ್ತು ಆ ಕೋಪ ಜಗಳಕ್ಕೆ ಕಾರಣವಾಗುತ್ತದೆ.

About The Author