Horoscope: ನಾವು ಯಾವ ದಿನಾಂಕದಲ್ಲಿ ಜನಿಸಿರುತ್ತೇವೆ ಎಂಬುದರ ಮೇಲೆ ನಮ್ಮ ಗುಣ, ಸ್ವಭಾವ ಎಲ್ಲವೂ ಡಿಪೆಂಡ್ ಆಗಿರುತ್ತದೆ. ಅದೇ ರೀತಿ ನಾವಿಂದು ಯಾವ ದಿನಾಂಕದಂದು ಜನಿಸಿದವರು ಭಾವನಾತ್ಮಕ ಸ್ವಭಾವದವರು ಆಗಿರುತ್ತಾರೆ ಎಂದು ತಿಳಿಯೋಣ ಬನ್ನಿ..
1.1 ನೇ ತಾರೀಖಿನಂದು ಜನಿಸಿದ ಹೆಣ್ಣು ಮಕ್ಕಳು ನಿಷ್ಠೆಯಿಂದ ಇರುತ್ತಾರೆ. ಹಾಗಾಗಿ ಇವರು ಭಾವನಾತ್ಮಕ ಸ್ವಭಾವದವರು ಎನ್ನಬಹುದು. ಆದರೆ ಇವರನ್ನು ನೋಡಿದಾಗ ಇವರು ತುಂಬಾ ಸ್ಟ್ರಾಂಗ್ ಆಗಿರುವಂತೆ ತೋರುತ್ತಾರೆ. ಅಲ್ಲದೇ, ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡುವ ಇವರು, ಯಾರ ಮನಸ್ಸನ್ನೂ ನೋಯಿಸಲು ಇಚ್ಛಿಸುವುದಿಲ್ಲ.
2. 2ನೇ ತಾರೀಖಿನಂದು ಜನಿಸಿದ ಹೆಣ್ಣು ಮಕ್ಕಳು ಕೂಡ ಭಾವನಾತ್ಮಕ ಜೀವಿಗಳು. ಇವರು ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. 2,20, 11 ಅಥವಾ 29ನೇ ತಾರೀಖು ಜನಿಸಿದವರ ಸಂಖ್ಯೆ 2 ಆಗಿರುತ್ತದೆ. ಈ ದಿನಾಂಕದಲ್ಲಿ ಜನಿಸಿದವರು ಸ್ವಭಾವತ ಶಾಂತ ಸ್ವಭಾವದವರಾಗಿರುತ್ತಾರೆ. ಅಲ್ಲದೇ, ತಮ್ಮ ಜೊತೆ ಇವರೂ ಬೆಳೆಯಲಿ ಎನ್ನುವ ಸ್ವಭಾವ ಈ ದಿನಾಂಕದಲ್ಲಿ ಜನಿಸಿದವರದ್ದಾಗಿರುತ್ತದೆ.
7. 7, 16, 25ನೇ ತಾರೀಖಿನಂದು ಜನಿಸುವವರ ಸಂಖ್ಯೆ 7 ಆಗಿರುತ್ತದೆ. ಇವರು ಕೂಡ ಸೌಮ್ಯ ಸ್ವಭಾವದ, ಇತರರ ಹಿತ ಬಯಸುವ ಮತ್ತು ಸಂಬಂಧಕ್ಕೆ ಮಹತ್ವ ನೀಡುವ ಸ್ವಭಾವದವರಾಗಿರುತ್ತಾರೆ. ಅಲ್ಲದೇ ಇವರಿಗೆ ಬೆರಳೆಣಿಕೆಯಷ್ಟು ಸ್ನೇಹಿತರಿರುತ್ತಾರೆ. ಮತ್ತು ಇವರು ಜೀವನ ಸಂಗಾತಿಗೆ ಹೆಚ್ಚಿನ ಪ್ರೀತಿ ನೀಡುವ ಮಹಿಳೆಯರಾಗಿರುತ್ತಾರೆ.




