Navaratri Special: ನೀವು ನವರಾತ್ರಿಯಲ್ಲಿ ಮೈಸೂರು ಕಡೆ ಜನರ ಮನೆಯಲ್ಲಿ ಗೊಂಬೆ ಕೂರಿಸೋದನ್ನ ನೋಡಿರ್ತೀರಿ. ತಮಿಳುನಾಡಿನಲ್ಲು ಕೂಡ ನವರಾತ್ರಿಯಲ್ಲಿ ಗೊಂಬೆ ಕೂರಿಸುವ ಪದ್ಧತಿ ಇದೆ. ಹಾಗಾದ್ರೆ ಯಾಕೆ ನವರಾತ್ರಿಯಲ್ಲಿ ಗೊಂಬೆ ಕೂರಿಸೋದು. ಈ ವೇಳೆ ಇರಬೇಕಾದ ಮುಖ್ಯವಾಗಿರುವ ಗೊಂಬೆ ಯಾವುದು..? ಇದರ ಮಹತ್ವವೇನು ಅಂತಾ ತಿಳಿಯೋಣ ಬನ್ನಿ..
ದಸರಾ ಸಮಯದಲ್ಲಿ ಕೆಲವರ ಮನೆಯಲ್ಲಿ ಗೊಂಬೆ ಕೂರಿಸಿ, ಪೂಜೆ ಮಾಡುವುದು ವಾಡಿಕೆ. ಹಾಗಾಗಿ ಇದನ್ನು ಗೊಂಬೆ ಹಬ್ಬ ಅಂತಲೂ ಕರೆಯುತ್ತಾರೆ. ಮನೆಯಲ್ಲಿ 9 ಮೆಟ್ಟಿಲು ಮಾಡಿ ಗೊಂಬೆ ಕೂರಿಸಬೇಕು. ಆದರೆ ಕೆಲವರು ಬೆಸ ಸಂಖ್ಯೆಯಲ್ಲಿ 3,5,7,9 ಹೀಗೆ ಮಾಡಿ,್ ಗೊಂಬೆ ಕೂರಿಸುತ್ತಾರೆ.
ಹಾಾಗಂತ ಮುಂಚೆ ಎಲ್ಲಾ ಸಿಕ್ಕ ಸಿಕ್ಕ ಗೊಂಬೆಗಳನ್ನು ಕೂರಿಸುತ್ತಿರಲಿಲ್ಲ. ಅಲ್ಲಿ ದೇವಿಯರು, ದೇವತೆಗಳು, ಬೇರೆ ಬೇರೆ ಕೆಲಸ ಮಾಡುವ ಜನರು. ಹೀಗೆ ಅರ್ಥಪೂರ್ಣವಾಗಿರು ಗೊಂಬೆ ಕೂರಿಸುತ್ತಿದ್ದರು. ಆಗ ಮಕ್ಕಳನ್ನು ಕೂರಿಸಿಕ“ಂಡು, ಅಲ್ಲಿ ಕೂರಿಸಿರುವ ಗೊಂಬೆಗಳು ಯಾವುದು..? ಲಕ್ಷ್ಮೀ, ಸರಸ್ವತಿ, ನವದುರ್ಗೆಯರು, ಕುಂಬಾರರು, ಹೀಗೆ ಬೇರೆ ಬೇರೆ ಗೊಂಬೆಗಳನ್ನು ತೋರಿಸಿ, ಕಥೆ ಹೇಳುತ್ತಿದ್ದರು. ಈ ರೀತಿ ಮಕ್ಕಳಿಗೆ ಗೊಂಬೆಗಳ ಮೂಲಕ ಜ್ಞಾನ ಹಂಚುತ್ತಿದ್ದರು. ಹಾಗಾಗಿ ಕೆಲವರು ಈಗಲೂ ಗೊಂಬೆ ಕೂರಿಸುವ ಪದ್ಧತಿಯನ್ನು ಅನುಸರಿಕ“ಂಡು, ಹಳೆಯ ಕಾಲದ ಪದ್ಧತಿಯನ್ನು ಮನೆಯದೇ ಪಾಲನೆ ಮಾಡುತ್ತಿದ್ದಾರೆ.
ಇನ್ನು ಗೊಂಬೆ ಕೂರಿಸುವಾಗ ಮುಖ್ಯವಾಗಿ ಇರಬೇಕಾದ ಗೊಂಬೆ ಅಂದ್ರೆ ಅದು ಪಟ್ಟದ ಗೊಂಬೆ. ಅಂದ್ರೆ ಜೋಡಿ ಗೊಂಬೆ. ಇದನ್ನ ಕಲ್ಯಾಣ ಗೊಂಬೆ ಅಂತಾನೂ ಕೆಲವರು ಕರೀತಾರೆ. ಹೆಣ್ಣು ಮಕ್ಕಳಿಗೆ ಮದುವೆಯಾಗಿ ಹೋಗುವಾಗ ತವರು ಮನೆಯವರು ಈ ಜೋಡಿ ಗೊಂಬೆನಾ ನೀಡ್ತಾರೆ. ರಾಜಾ ರಾಣಿ ಗೊಂಬೆನಾ ತೊಟ್ಟಲಿಗೆ ಹಾಕಿ ತೂಗಿ, ಮಧು ಮಕ್ಕಲಿಗೆ ಬೇಗ ಮಕ್ಕಳಾಗಲಿ ಎಂದು ಮತ್ತು ನೀವಿಬ್ಬರೂ ರಾಜಾ-ರಾಣಿಯ ರೀತಿ ಸದಾ ಸುಖವಾಗಿರಿ, ನೆಮ್ಮದಿಯಾಗಿರಿ ಎಂದು ಆಶೀರ್ವದಿಸಿ, ಇದನ್ನ ನೀಡಲಾಗತ್ತೆ.
ಅದನ್ನು ಪಡೆದ ಮಗಳು, ನವರಾತ್ರಿ ಸಮಯದಲ್ಲಿ ಮನೆಯಲ್ಲಿ ಗೊಂಬೆ ಕೂರಿಸುವಾಗ, ಬೇರೆ ಬೇರೆ ಗೊಂಬೆಗಳ ಮಧ್ಯೆ ಆ ಜೋಡಿ ಗೊಂಬೆಯನ್ನು ಕೂರಿಸಿ, ಕಲಶ ಕೂರಿಸಿ, ದೇವಿ ಪೂಜೆ ಮಾಡುತ್ತಾರೆ. 9 ದಿನ 9 ದೇವಿಯರಿಗೆ ಪೂಜೆ ಸಲ್ಲಿಸಿ, ಪ್ರತಿದಿನ ಬಗೆ ಬಗೆಯ ಸಿಹಿ ನೈವೇದ್ಯ ಮಾಡುತ್ತಾರೆ.
ಕೆಲವರು ಈ ದಿನ ಅಕ್ಕ ಪಕ್ಕದವರಿಗೆಲ್ಲಾ ಪೂಜೆಗೆ ಕರೆದು, ಭಜನೆ ಇತ್ಯಾದಿಗಳನ್ನು ಮಾಡಿ, ಪ್ರಸಾದ ಹಂಚಿ ಪೂಜೆ ಸಂಪನ್ನ ಮಾಡುತ್ತಾರೆ. ಇನ್ನೂ ಅನುಕೂಲಸ್ಥರು, ನವರಾತ್ರಿಯಲ್ಲಿ 1 ದಿನ ಎಲ್ಲರಿಗೂ ಅನ್ನ ಪ್ರಸಾದ ವ್ಯವಸ್ಥೆ ಮಾಡುತ್ತಾರೆ. ಈ ರೀತಿಯಾಗಿ ಗೊಂಬೆ ಕೂರಿಸಿ, ನವರಾತ್ರಿ ಪೂಜೆ ಮಾಡಲಾಗುತ್ತದೆ.




