Sandalwood: ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿರುವ ಸಿನಿಮಾ ಅಂದ್ರೆ ಅದು ಪ್ರೇಮದ ಊರಲಿ ಸಿನಿಮಾ. ಈ ಸಿನಿಮಾದಲ್ಲಿ ಟಾಮ್ ಬಾಯ್ ಆಗಿ ನಟಿಸಿರುವ ರಮಿಕಾ ಶಿವು ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿಜರ್ನಿ ಹೇಗೆ ಶುರುವಾಯ್ತು ಅನ್ನೋ ಬಗ್ಗೆ ಮಾತನಾಡಿದ್ದಾರೆ.
ರಮಿಕಾ ಅವರನ್ನು ಅವರ ಚಿಕ್ಕಪ್ಪ ಮಾಲಾಶ್ರೀ ಅಂತಾ ಕರಿತಿದ್ರಂತೆ. ಅಲ್ಲದೇ, ಮಂಡ್ಯ ರಮೇಶ್ ಅವ್ರೂ ರಮಿಕಾರನ್ನ ಹಿರೋಯಿನ್ ಅಂತಾ ಕರೀತಿದ್ರು. ಇದೆಲ್ಲಾ ಕೇಳಿದಾಗ, ತಾನೂ ಹಿರೋಯಿನ್ ಆಗ್ಬೇಕು ಅಂತಾ ರಮಿಕಾ ಅವ್ರಿಗೆ ಅನ್ಸಿತ್ತಂತೆ.
ಅಲ್ಲದೇ ರಮಿಕಾ ಸಣ್ಣದಿರುವಾಗ ಕನ್ನಡಿ ಮುಂದೆ ನಿಂತು ನಟನೆ ಮಾಡುತ್ತಿದ್ದರಂತೆ. ಆಗ ಸುಮ್ಮನೆ ಆಡಿದ್ದ ಆಟ, ಈಗ ತುಂಬಾ ಸಹಾಯಕ್ಕೆ ಬಂದಿದೆ ಅಂತಾರೆ ರಮಿಕಾ ಶಿವು. ಅಲ್ಲದೇ ಹೈಸ್ಕೂಲ್ ಬಳಿಕ ರಮಿಕಾ ಅವರಿಗೆ ಸಪರೇಟ್ ರೂಮಿನಲ್ಲಿ ಇರುವ ಅವಕಾಶ ಸಿಕ್ಕಾಗ. ರಮಿಕಾ ಅವರೇ ಸೀನ್ ಕ್ರಿಯೇಟ್ ಮಾಡಿ, ಅದಕ್ಕೆ ತಕ್ಕಂತೆ, ಕನ್ನಡಿ ನೋಡಿ ನಟಿಸುತ್ತಿದ್ದರಂತೆ.
ಅಲ್ಲದೇ ರಮಿಕಾ ಮತ್ತು ಅವರ ಸಹೋದರಿಗೆ ಸುಮ್ಮನೆ ತಮ್ಮಲ್ಲೇ ಮಾತನಾಡುವ ಅಭ್ಯಾಸವಿದೆಯಂತೆ. ಇತ್ತೀಚೆಗೆ ಅಪರೂಪಕ್ಕೆ ಆ ರೀತಿ ಮಾಡಿದ್ದಾಗ, ಕೆಲವರು ಈಕೆ ಹುಚ್ಚಿ ಅಂತಾ ಹೇಳೋಕ್ಕೆ ಶುರು ಮಾಡಿದ್ರು ಅಂತಾ ನಕ್ಕಿದ್ದಾರೆ ರಮಿಕಾ. ಇದೇ ರೀತಿ ಮಿರರ್ ನೋಡಿ ತಮ್ಮಲ್ಲೇ ಮಾತಾಡಿ, ನಟಿಸಿಯೇ ನಟನೆ ಕಲಿತಿದ್ದಾರಂತೆ ರಮಿಕಾ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




