Sandalwood: ಸದ್ಯ ಸ್ಯಾಂಡಲ್ವುಡ್ನಲ್ಲಿ ಸೌಂಡ್ ಮಾಡುತ್ತಿರುವ ಸಿನಿಮಾ ಆಗಿರುವ ಪ್ರೇಮದ ಊರಲಿ ಸಿನಿಮಾ ಖ್ಯಾತಿಯ ರಮಿಕಾ ಶಿವು ಸಂದರ್ಶನದಲ್ಲಿ ಮಾತನಾಡಿದ್ದಾರೆ.
ರಮಿಕಾ ಶಿವು ಚಿಕ್ಕಂದಿನಿಂದಲೇ, ಸಿನಿಮಾ ನೋಡಿ ನೋಡಿ, ಮಿರರ್ ಮುಂದೆ ನಿಂತು ಹಾಗೇ ಆ್ಯಕ್ಟಿಂಗ್ ಮಾಡೋಕ್ಕೆ ಟ್ರೈ ಮಾಡ್ತಿದ್ರಂತೆ. ಇದೇ ಅಭ್ಯಾಸವೇ ಅವರು ಇಂದು ಉತ್ತಮ ನಟಿಯಾಗಲು ಸಹಾಯ ಮಾಡಿದೆ ಅಂತಾರೆ ರಮಿಕಾ ಶಿವು.
ಅಲ್ಲದೇ ನೀವು ನಿಮ್ಮ ಮೇಲೆ ನಂಬಿಕೆ ಇಟ್ಟು ನಿಮ್ಮ ಜೀವನದಲ್ಲಿ ಮುಂದುವರಿಯಬೇಕು. ನಿಮ್ಮ ಗುರಿಯತ್ತ ಗಮನ ಹರಿಸಬೇಕು. ಎಲ್ಲರಿಗೂ ನೀವು ವಿವರಿಸಲು ಸಾಧ್ಯವಿಲ್ಲ. ಅದರ ಅಗತ್ಯವೂ ಇರುವುದಿಲ್ಲ. ನಿಮ್ಮ ಗುರಿಯ ಬಗ್ಗೆ ಅಷ್ಟೇ ನಿಮ್ಮ ಗಮನವಿರುವುದು ಮುಖ್ಯ ಎಂದಿದ್ದಾರೆ ರಮಿಕಾ ಶಿವು.
ಅಲ್ಲದೇ ನೀವು ಇನೋಸೆಂಟ್ ಆಗಿರೋಕ್ಕೆ ಸಾಧ್ಯವಿಲ್ಲ. ನಾನು ಮುಂಚೆ ಅಳುಮುಂಜಿ ಇದ್ದೆ. ಆದರೆ ಬಳಿಕ ಹೀಗಿದ್ದರೆ ಬದುಕಲು ಸಾಧ್ಯವಿಲ್ಲ, ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಅರಿತು ನಾನು ಧೈರ್ಯವಾಗಿ ಮುಂದುವರಿದೆ ಅಂತಾರೆ ರಮಿಕಾ ಶಿವು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




