Political News: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ಜೆ.ಪಿ.ನಗರದ ಜೆಡಿಎಸ್ ಕಚೇರಿಯಲ್ಲಿ ಪ್ರೆಸ್ಮೀಟ್ ನಡೆಸಿ ಮಾತನಾಡಿದ್ದು, ಸ್ಟಿಂಗ್ ಆಪರೇಷನ್ ಕೇಸ್ನಲ್ಲಿ ನನ್ನನ್ನೂ ಫಿಕ್ಸ್ ಮಾಡುವ ಸಂಚು ನಡೆದಿತ್ತು ಎಂದು ಹೇಳಿದ್ದಾರೆ.
ಸ್ಟಿಂಗ್ ಆಪರೇಷನ್ ಮೂಲ ವ್ಯಕ್ತಿಯನ್ನು ಕರೆಸಿ, ನ್ಯಾಯಾಲಯದಲ್ಲಿ ಸಿಆರ್ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ದಾಖಲಿಸುವ ಮೂಲಕ, ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಹಿಂದೆ ತಾನು ಸಿದ್ದರಾಮಯ್ಯ ಅವರ ಸ್ಟಿಂಗ್ ಆಪರೇಷನ್ ಕೇಸ್ನಲ್ಲಿ ತಡೆಯಾಜ್ಞೆ ತರಬೇಡಿ, ಬದಲಾಗಿ ಧೈರ್ಯವಾಗಿ ಎದುರಿಸಿ ಎಂದು ಹೇಳಿದ್ದೆ ಎಂದಿರುವ ಕುಮಾರಸ್ವಾಮಿ, ಇತ್ತೀಚೆಗೆ ಸಿಎಂ ಸೂಚನೆ ಮೇರೆಗೆ ಗೃಹಮಂತ್ರಿ ತನಿಖೆ ಚುರುಕುಗ“ಳಿಸಿದ್ದಾರೆಂದು ಹೇಳಿದ್ದಾರೆ.
ಅಲ್ಲದೇ ನಾನೇನು ರೇವಣ್ಣನಾ..? ಅವರಂತೆ ನನ್ನನ್ನು ಸುಲಭವಾಗಿ ಜೈಲಿಗೆ ಕಳುಹಿಸಲು ಸಾಧ್ಯವೇ..? ಎಂದು ಕುಮಾರಸ್ವಾಮಿ ಪ್ರಶ್ನೆ ಕೇಳಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ವಿಜಯದಶಮಿ ಸಂದರ್ಭದಲ್ಲಿ ಮಾತನಾಡುತ್ತೇನೆ ಎಂದಿದ್ದೆ. ಯುದ್ಧಕ್ಕೆ ಹೋಗುವ ಸಮಯ ಬಂದಿದೆ ಎಂದು ಹೇಳಿದ್ದೆ. ತಾಯಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದಂತೆ ಅನ್ಯಾಯದ ವಿರುದ್ಧವೂ ಹೋರಾಟ ನಡೆಯಬೇಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.




