ಜನನ ಇದೆ ಎಂದ ಮೇಲೆ ಮರಣ ಇದ್ದೇ ಇರುತ್ತದೆ ಎಂದರ್ಥ. ಜನಿಸಿದವರು ಸಾಯಲೇಬೇಕು. ಇದು ಪ್ರಕೃತಿ ನಿಯಮ. ಜನನ ಯಾವಾಗ ಎಂದು ತಿಳಿದಿರುತ್ತದೆ. ಆದ್ರೆ ಮರಣ ಯಾವಾಗ ಎಂದು ಯಾರಿಗೂ ತಿಳಿದಿರುವುದಿಲ್ಲ. ಹಾಗಾಗಿ ಸಾವು ಸಂಭವಿಸಿದಾಗ, ದಫನ್ ಮಾಡಲು ಸ್ಮಶಾನಕ್ಕೆ ಹೋಗಲೇಬೇಕಾಗುತ್ತದೆ. ಅಂಥ ಸಮಯದಲ್ಲಿ ನಾವು ಕೆಲ ತಪ್ಪುಗಳನ್ನು ಎಂದಿಗೂ ಮಾಡಬಾರದು. ಆ ತಪ್ಪುಗಳು ಯಾವುದು ಅಂತಾ ತಿಳಿಯೋಣ ಬನ್ನಿ.
ಕೂದಲು ಬಿಟ್ಟು ತಿರುಗಬೇಡಿ: ಸ್ಮಶಾನಕ್ಕೆ ಹೋದಾಗ ಅಲ್ಲಿ ಕೂದಲು ಬಿಟ್ಟು ಎಂದಿಗೂ ತಿರುಗಬೇಡಿ. ಏಕೆಂದರೆ, ಹೆಣ್ಣು ಮಕ್ಕಳ ಕೂದಲು ಬಿಟ್ಟಾಗಲೇ ನಕಾರಾತ್ಮಕ ಶಕ್ತಿಗಳು ದೇಹ ಸೇರುವ ಸಾಧ್ಯತೆ ಇರುತ್ತದೆ. ಕೂದಲು ಬಿಡುವುದು ಈಗ ಫ್ಯಾಷನ್ ಆಗಿದ್ದರೂ, ಹಲವರಿಗೆ ಮಾನಸಿಕ ಸಮಸ್ಯೆ ಬಂದಿರುವುದೇ , ಮಧ್ಯಾಹ್ನದ ವೇಳೆ, ರಾತ್ರಿ ವೇಳೆ ಈ ರೀತಿ ಕೂದಲು ಬಿಟ್ಟು ತಿರುಗಿರುವ ಸಂದರ್ಭದಲ್ಲಿ. ಹಾಗಾಗಿ ಸ್ಮಶಾನಕ್ಕೆ ಹೋಗುವ ವೇಳೆ ಎಂದಿಗೂ ಕೂದಲು ಬಿಡಬೇಡಿ.
ಸತ್ತವರ ಬಗ್ಗೆ ತಮಾಷೆ ಮಾಡಬೇಡಿ, ಅವರನ್ನು ಮಾತನಾಡಿಸುವ ಪ್ರಯತ್ನ ಬೇಡಾ: ಸ್ಮಶಾನಕ್ಕೆ ಹೋದಾಗ ಕೆಲವರು ತಮಾಷೆಗಾಗಿ ಸಮಾಧಿಯ ಬಳಿ ಹೋಗಿ, ಮಾತನಾಡಿಸಲು ಪ್ರಯತ್ನಿಸುತ್ತಾರೆ. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ವೀವ್ಸ್ ಬರಲಿ ಎಂದು ಹೀಗೆ ಮಾಡುವವರಿರುತ್ತಾರೆ. ಇಂಥ ಪ್ರಯತ್ನಿಸಿದ್ದಲ್ಲಿ, ಆ ನಕಾರಾತ್ಮಕ ಶಕ್ತಿ ನಿಮ್ಮ ಜೀವಕ್ಕೆ ಅಪಾಯ ತರಬಹುದು.
ಸಮಾಧಿ ಮೇಲೆ ಆಹಾರಗಳನ್ನಿರಿಸಿದರೆ ಅದನ್ನು ತಿನ್ನಬೇಡಿ: ಕೆಲವರು ಸಮಾಧಿಯ ಮೇಲೆ ಸತ್ತವರ ಇಷ್ಟದ ಆಹಾರವನ್ನಿರಿಸಿ ಹೋಗಿರುತ್ತಾರೆ. ಅಂಥ ಸಂದರ್ಭದಲ್ಲಿ ಬೇರೆ ಯಾರೂ ಆ ಆಹಾರವನ್ನು ಸೇವಿಸುವಂತಿಲ್ಲ. ಹಾಗೇನಾದರೂ ಸೇವಿಸಿದ್ದಲ್ಲಿ, ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವಾಗುವ ಸಾಧ್ಯತೆ ಇರುತ್ತದೆ.
ಸ್ಮಶಾನದಲ್ಲಿ ಯಾವುದೇ ಬೆಲೆಬಾಳುವ ವಸ್ತು ಸಿಕ್ಕರೂ ಅದನ್ನು ತರಬೇಡಿ: ಸ್ಮಶಾನದಲ್ಲಿ ಸತ್ತವರ ಬೆಲೆ ಬಾಳುವ ವಸ್ತುಗಳಿರುವ ಸಾಧ್ಯತೆ ಇರುತ್ತದೆ. ಅಥವಾ ಸಂಬಂಧಿಕರೇ, ಸಮಾಧಿಯ ಮೇಲೆ ಅವರಿಷ್ಟದ ಬೆಲೆ ಬಾಳುವ ವಸ್ತುವನ್ನಿರಿಸಿರುತ್ತಾರೆ. ಹಾಗಾಗಿ ಚಿನ್ನ, ಬೆಳ್ಳಿ ಏನೇ ಸಿಕ್ಕರೂ ಸಮಾಧಿಯ ಮೇಲಿನ ವಸ್ತುಗಳನ್ನು ಮುಟ್ಟಬೇಡಿ.




