Hubli News: ಹುಬ್ಬಳ್ಳಿಯಲ್ಲಿ ಖಾಸಗಿ ಬಸ್ ಭೀಕರ ಅಪಘಾತ: 8 ವರ್ಷದ ಬಾಲಕಿ ಸಾ*ವು

Hubli News: ಹುಬ್ಬಳ್ಳಿಯಲ್ಲಿ ಖಾಸಗಿ ಬಸ್ ಭೀಕರ ಅಪಘಾತ ಸಂಭವಿಸಿದೆ..! ಮುಂಬೈನಿಂದ ಬೆಂಗಳೂರಿನ ಕಡೆಗೆ ಹೊರಟಿದ್ದ ಎಂ.ಆರ್. ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್, ಛಬ್ಬಿ ಕ್ರಾಸ್ ಬಳಿಕ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಲಕ್ಕೆ ನುಗ್ಗಿದೆ. ಬೆಳಗಿನ ಜಾವ ಸುಮಾರು 3 ಗಂಟೆಗೆ ನಡೆದ ಈ ಅಪಘಾತದಲ್ಲಿ 8 ವರ್ಷದ ದಿವ್ಯ ಕುಮಾರಿ ಮೃತಪಟ್ಟಿದ್ದಾಳೆ. ಬಸ್ ಚಾಲಕ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂಬೈನಿಂದ ಬೆಂಗಳೂರಿನತ್ತ ಹೊರಟಿದ್ದ ಖಾಸಗಿ ಬಸ್..!
ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಸಂಭವಿಸಿದ ಭೀಕರ ಅಪಘಾತ..!

ಹುಬ್ಬಳ್ಳಿಯ ಛಬ್ಬಿ ಕ್ರಾಸ್‌ ದಾಟಿದ ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿಯ ಹೊಲಕ್ಕೆ ನುಗ್ಗಿದೆ. ಅಪಘಾತದ ರಭಸಕ್ಕೆ ಬಸ್‌ನೊಳಗಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಬಸ್‌ನಲ್ಲಿ ಒಟ್ಟು 26 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಚಾಲಕ ಸೇರಿದಂತೆ 15 ಜನರಿಗೆ ಗಂಭೀರ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ದುರದೃಷ್ಟವಶಾತ್, ಈ ಅಪಘಾತದಲ್ಲಿ 8 ವರ್ಷದ ದಿವ್ಯ ಕುಮಾರಿ ಮೃತಪಟ್ಟಿದ್ದಾಳೆ.

ಇನ್ನು ಅಪಘಾತದ ತೀವ್ರತೆಗೆ ಚಾಲಕನ ಕಾಲು ಬಸ್‌ನೊಳಗೆ ಸಿಲುಕಿಕೊಂಡಿತ್ತು. ನೋವಿನಿಂದ ನರಳುತ್ತಿದ್ದ ಚಾಲಕನನ್ನು ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು. ಅಗ್ನಿಶಾಮಕ ಸಿಬ್ಬಂದಿಯ ನೆರವಿನಿಂದ ಚಾಲಕನನ್ನು ಹೊರಕ್ಕೆ ತೆಗೆದು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.

ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

About The Author