ಚಿನ್ನ ಹಾಗೂ ಬೆಳ್ಳಿ ಪ್ರಿಯರಿಗೆ ಇಂದಿನ ಪ್ರಮುಖ ಮಾರುಕಟ್ಟೆ ಅಪ್ಡೇಟ್ ಇಲ್ಲಿದೆ. ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 20 ರೂಪಾಯಿ ಏರಿಕೆಯಾಗಿದೆ. ಆದರೆ ಒಟ್ಟಾರೆಯಾಗಿ ಈ ವಾರ ಚಿನ್ನದ ಬೆಲೆ 345 ರೂಪಾಯಿಗಳಷ್ಟು ಕಡಿಮೆಯಾಗಿದೆ. ಭಾರತದಂತೆ ವಿದೇಶಗಳಲ್ಲೂ ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ ತುಸು ಹೆಚ್ಚಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸ್ಪಾಟ್ ಗೋಲ್ಡ್ ಬೆಲೆ ಸ್ವಲ್ಪ ಏರಿಕೆ ಕಂಡಿದೆ ಎಂದು ವರದಿಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ತುಸು ಇಳಿಕೆಯಾಗಿದೆ ಎನ್ನಲಾಗ್ತಿದೆ.
ಅಕ್ಟೋಬರ್ 18ರ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದಲ್ಲಿ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ಪ್ರತಿ 10 ಗ್ರಾಮ್ಗೆ 1,47,660 ರೂಪಾಯಿ ಇದ್ದರೆ, 22 ಕ್ಯಾರಟ್ ಚಿನ್ನದ ಬೆಲೆ 1,35,350 ರೂಪಾಯಿ ಇದೆ. ಇನ್ನು 1 ಗ್ರಾಂ ಚಿನ್ನದ ದರ ನೋಡುವುದಾದರೆ, 24 ಕ್ಯಾರಟ್ಗೆ 14,766 ರೂ., 22 ಕ್ಯಾರಟ್ಗೆ 13,535 ರೂ. ಹಾಗೂ 18 ಕ್ಯಾರಟ್ ಚಿನ್ನಕ್ಕೆ 11,074 ರೂಪಾಯಿ ಇದೆ.
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಬಹುತೇಕ ಒಂದೇ ಸಮನಾಗಿದೆ. ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತಾ ಮತ್ತು ಕೇರಳದಲ್ಲಿ 10 ಗ್ರಾಮ್ ಚಿನ್ನದ ಬೆಲೆ 1,35,350 ರೂಪಾಯಿ ಇದ್ದರೆ, ದೆಹಲಿ, ಜೈಪುರ್ ಮತ್ತು ಲಕ್ನೋದಲ್ಲಿ ಗ್ರಾಂಗೆ 13,550 ರೂಪಾಯಿ ಇದೆ.
ಬೆಳ್ಳಿ ಮಾರುಕಟ್ಟೆ ಗಮನಿಸುವುದಾದರೆ, ಭಾರತದಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ 23,000 ರೂಪಾಯಿ ಇದೆ. ಅಂದರೆ 1 ಗ್ರಾಂ ಬೆಳ್ಳಿಗೆ 230 ರೂಪಾಯಿಯಿಂದ 240 ರೂಪಾಯಿ ತನಕ ಮಾರಾಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ ಸುಮಾರು 133 ಡಾಲರ್ ಅಂದರೆ 12,718 ರೂಪಾಯಿ ಹಾಗೂ ಸ್ಪಾಟ್ ಸಿಲ್ವರ್ 1.83 ಡಾಲರ್ ಅಂದರೆ 174 ರೂಪಾಯಿ ಆಸುಪಾಸಿನಲ್ಲಿದೆ.



