ನಿಮ್ಮ ಅಧಿಕಾರವನ್ನು ದೇಶದ್ರೋಹಿಗಳನ್ನು ಮಟ್ಟಹಾಕಲು ಬಳಸಿ, ದೇಶಭಕ್ತರನ್ನು ಹತ್ತಿಕ್ಕಲು ಅಲ್ಲ: ಛಲವಾದಿ

Political News: ವಿಜಯದಶಮಿ ಪ್ರಯುಕ್ತವಾಗಿ ನಡೆದಿದ್ದ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಛಲವಾದಿ ನಾರಾಯಣಸ್ವಾಮಿ ಗಣವೇಷಧಾರಿಯಾಗಿ ಭಾಗಿಯಾಗಿದ್ದಾರೆ.

ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಛಲವಾದಿ, ರಾಷ್ಟ್ರ ಮೊದಲು ಎಂಬ ಧ್ಯೇಯದೊಂದಿಗೆ ನಡೆಯುವ ಆರ್.ಎಸ್.ಎಸ್‌ನ ವಿಜಯದಶಮಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದು ನನಗೆ ಅತೀವ ಹೆಮ್ಮೆ ತಂದಿದೆ. ‘ಬಲ್ಲವನೇ ಬಲ್ಲ ಬೆಲ್ಲದ ರುಚಿ’ ಎಂಬಂತೆ, ಸಂಘದ ಮೌಲ್ಯಗಳು ಹಾಗೂ ದೇಶಭಕ್ತಿಯ ಅರಿವು ಇದರಲ್ಲಿ ಭಾಗವಹಿಸಿದವರಿಗೆ ಮಾತ್ರ ತಿಳಿಯಲು ಸಾಧ್ಯ. ವಿರೋಧಿಸುವವರಿಗೆ ಇದು ಕಹಿಯಾಗಿಯೇ ಕಾಣುತ್ತದೆ ಎಂದು ಗೃಹಸಚಿವರ ವಿರುದ್ಧ ತಿವಿದಿದ್ದಾರೆ.

“ಆರೆಸ್ಸೆಸ್ ಕೇವಲ ಒಂದು ಸಂಘಟನೆಯಲ್ಲ, ಅದೊಂದು ದೇಶಭಕ್ತರ ಕೂಟ!” ಗೃಹ ಸಚಿವಾಲಯ ಸಿಕ್ಕಿದೆ ಎಂಬ ಅಹಂಕಾರದಲ್ಲಿ ರಾಜ್ಯ ಸರ್ಕಾರ ದೇಶಭಕ್ತರ ಕಾರ್ಯಕ್ರಮಗಳನ್ನು ವಿರೋಧಿಸುವ ಹಾಗೂ ಹತ್ತಿಕ್ಕುವ ಕೆಟ್ಟ ಪರಂಪರೆಗೆ ಮುಂದಾಗಿದೆ. ಸರ್ಕಾರಕ್ಕೆ ನನ್ನದೊಂದು ನೇರ ಸವಾಲು: ನಿಮ್ಮ ಅಧಿಕಾರವನ್ನು ದೇಶದ್ರೋಹಿಗಳನ್ನು ಮಟ್ಟಹಾಕಲು ಬಳಸಿ, ದೇಶಭಕ್ತರನ್ನು ಹತ್ತಿಕ್ಕಲು ಅಲ್ಲ!

ಇದೇ ರೀತಿ ಅವಿವೇಕಿತನದಿಂದ ಇಷ್ಟಬಂದಂತೆ ವರ್ತಿಸಿದರೆ, ರಾಜ್ಯದ ದೇಶಭಕ್ತರೆಲ್ಲಾ ಒಗ್ಗೂಡಿ ಮುಂದೊಂದು ದಿನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಚ್ಚರ. ಜೈ ಹಿಂದ್, ಭಾರತ್ ಮಾತಾ ಕೀ ಜೈ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

About The Author