Political News: ವಿಜಯದಶಮಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಆರ್ಎಸ್ಎಸ್ ಭವ್ಯ ಪಥಸಂಚಲನ ನಡೆಯಿತು. ಆರ್ಎಸ್ಎಸ್ ಸ್ವಯಂ ಸೇವಕರು, ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಲ್ಲಿ ಪಥಸಂಚಲದಲ್ಲಿ ಭಾಗಿಯಾಗಿದ್ದರು.
ನೆಹರು ಮೈದಾನದಿಂದ ಆರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪಥಸಂಚಲನದಲ್ಲಿ ಸಹಸ್ರಾರು ಸ್ವಯಂಸೇವಕರು ಭಾಗವಹಿಸಿದ್ದು, ಹುಬ್ಬಳ್ಳಿಯಲ್ಲಿ ಆರ್ಎಸ್ಎಸ್ ಪಥಸಂಚಲನ ಗಮನ ಸೆಳೆಯಿತು.
ಇನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕೂಡ ಆರ್ಎಸ್ಎಸ್ ಗಣವೇಷ ಧರಿಸಿ ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು. ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಮುನ್ನ ಗೃಹಸಚಿವ ಪ್ರಿಯಾಂಕ್ ಖರ್ಗೆ, ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ಪಡೆಯುವಂತೆ ತಾಕೀತು ಮಾಡಿದ್ದರು. ಆದರೆ ಎಂದಿನಂತೆ ಪೋಲೀಸರಿಗೆ ಪತ್ರ ಬರೆದು ಪಥಸಂಚಲನ ನಡೆಸಲಾಗಿದೆ. ಅನುಮತಿ ಪಡೆಯದಿದ್ದರೂ ಪಥಸಂಚಲನ ಕಿಂಚಿತ್ತೂ ಸಮಸ್ಯೆ ಆಗದಂತೆ ನೆರವೇರಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇದು ಗೃಹ ಸಚಿವ ಪ್ರಿಯಾಂಕ ಖರ್ಗೆ ತಿಳಿದುಕೊಳ್ಳಬೇಕು. ಗೃಹಸಚಿವರು ಸುಖಾಸುಮ್ಮನೆ ಆರ್ ಎಸ್ ಎಸ್ ಟಾರ್ಗೆಟ್ ಮಾಡ್ತಾರೆ. ಆರ್ ಎಸ್ ಎಸ್ ಪಥಸಂಚಲನಕ್ಕೆ ಯಾರಿಂದಲೂ ಅಡ್ಡಿಪಡಿಸಲು ಸಾಧ್ಯವಿಲ್ಲ.
ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ದೇಶಜಾಗೃತಿಯ ಹೆಜ್ಜೆ ಇಡಲಾಗಿದೆ. ಗೃಹ ಸಚಿವರು ತಮ್ಮ ಮನಸ್ಸೊ ಇಚ್ಛೆ ಮಾತನಾಡಿದರೂ ಪಥಸಂಚಲನ ನಿಲ್ಲೊದಿಲ್ಲ. ಆರ್ ಎಸ್ ಎಸ್ ಒಂದು ರಾಷ್ಟ್ರ ಚಿಂತನೆಯ ಸಂಘಟನೆ. ಖರ್ಗೆಯವರು ಏನೇ ಮಾಡಿದರು ಜನರು, ಅಧಿಕಾರಿಗಳು ರಾಷ್ಟ್ರಹಿತದ ಪರ. ಈ ನೈಜ ಸತ್ಯವನ್ನು ಪ್ರಿಯಾಂಕ ಖರ್ಗೆ ಅರ್ಥ ಮಾಡಿಕೊಳ್ಳವುದು ಒಳಿತು. ಆರ್ ಎಸ್ ಎಸ್ ಜಪ ಎಷ್ಟೇ ಜನ ಮಾಡಿದರು, ಎಂದಿಗೂ ಆರ್ ಎಸ್ ಎಸ್ ಬದಲಾಗುವುದಿಲ್ಲ. ಈ ಸಂದೇಶ ನೇರವಾಗಿ ಮತ್ತೊಮ್ಮೆ ರವಾನೆಯಾಗಿರುವುದನ್ನು ಅರ್ಥೈಸಿಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಇನ್ನು ಪಥಸಂಚಲನದ ಬೀದಿ ಬೀದಿಗಳಲ್ಲಿ, ಸರ್ಕಲ್ ಗಳಲ್ಲಿ ಹಬ್ಬದ ವಾತಾವರಣ ಇದ್ದು, ಪ್ರತಿ ಸರ್ಕಲ್ ನಲ್ಲೂ ಸಣ್ಣಮಕ್ಕಳು ಸ್ವತಂತ್ರ ಹೋರಾಟಗಾರರ ವೇಷಭೂಷಣ ತೊಟ್ಟಿದ್ದರು. ಈ ಪುಟಾಣಿಗಳ ವೇಷಭೂಷಣಗಳೇ ಈ ಪಥಸಂಚಲನದ ಶೋಭೆ ಹೆಚ್ಚಿಸಿದೆ ಎಂದರೂ ತಪ್ಪಾಗದು.




