Political News: ರೆಸ್ಯೂಮಿನಲ್ಲಿ ಮಾತೃಭಾಷೆ ಕನ್ನಡ ಎಂದಿದ್ದರೆ ಸಂದರ್ಶನಕ್ಕೂ ಆಯ್ಕೆ ಮಾಡುತ್ತಿಲ್ಲವೆಂದು ಸೋಶಿಯಲ್ ಮೀಡಿಯಾದಲ್ಲಿ ಯುವತಿ ವೀಡಯೋ ಮಾಡಿದ್ದು ಸುದ್ದಿಯಾಗಿತ್ತು.
ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ರಾಜ್ಯ ಸರ್ಕಾರದ ವಿರುದ್ಧವೂ ತೀವ್ರ ಖಂಡನೆ ವ್ಯಕ್ತವಾಗಿತ್ತು. ಈ ವಿಷಯಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಡಿಕೆಶಿ, ಕನ್ನಡಿಗರಿಗೆ ಅನ್ಯಾಯವಾದ್ರೆ ರಾಜ್ಯ ಸರ್ಕಾರ ಎಂಎನ್ಸಿ ಕಂಪನಿಗಳ ವಿರುದ್ಧ ಕ್ರಮ ಕೈಗ“ಳ್ಳುತ್ತದೆ ಎಂದು ಎಚ್ಚರಿಕೆ ಕೂಡ ನೀಡಿದ್ದರು.
ಇದೀಗ ಆ ವಿಷಯಕ್ಕೆ ಸಂಬಂಧಿಸಿದಂತೆ, ಸಾಲು ಸಾಲು ಪ್ರಶ್ನೆ ಕೇಳಿದ್ದಲ್ಲದೇ, ರಾಜ್ಯ ಸರ್ಕಾರದ ನಡೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾನ್ಯ Dialogue King ಶ್ರೀ ಡಿ.ಕೆ.ಶಿವಕುಮಾರ್ ಅವರೇ ಐಟಿ ಹಾಗೂ ಇತರ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗಾದ್ಯತೆ ನೀಡಬೇಕೆಂಬ ನಿಮ್ಮ ಹೇಳಿಕೆಯನ್ನು ನಾವೂ ಸಂಪೂರ್ಣವಾಗಿ ಬೆಂಬಲಿಸುತ್ತೇವೆ!
ಆದರೆ ಇದೇ ಕಾಲಕ್ಕೆ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಸುಮಾರು 2.50 ಲಕ್ಷಕ್ಕೂ ಹೆಚ್ಚಿನ ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸದೇ, ನಿರುದ್ಯೋಗಿ ಕನ್ನಡ ಯುವಕ-ಯುವತಿಯರನ್ನು ಅವಕಾಶ ವಂಚಿತರನ್ನಾಗಿಸಿ, ಅವರ ಭವಿಷ್ಯಕ್ಕೆ ಕಲ್ಲು ಹಾಕುತ್ತಿರುವ ನಿಮ್ಮ ನಡೆ ಕನ್ನಡ ಹಾಗೂ ಕನ್ನಡಿಗರ ಬಗೆಗಿನ ಡೋಂಗಿ ಕಾಳಜಿ ಹಾಗೂ ಬದ್ಧತೆಯನ್ನು ಸಾಕ್ಷೀಕರಿಸುತ್ತದೆ. ಕನ್ನಡ ನಾಡಿನಲ್ಲಿ ಖಾಸಗಿ ವಲಯವೂ ಕೂಡ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಆದ್ಯತೆ ನೀಡಲೇ ಬೇಕು, ಆದರೆ ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗ ನೀಡುವ ನಿಮ್ಮ ಜವಾಬ್ದಾರಿಯ ಬಗ್ಗೆಯೂ ನೀವು ಯಾಕೆ ಮಾತನಾಡುತ್ತಿಲ್ಲ?! ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಜೆನ್-ಝೀ ಸಮೂಹವನ್ನು ದಿಕ್ಕುತಪ್ಪಿಸುವ ಕಾರ್ಯದಲ್ಲಿ ತಲ್ಲೀನರಾಗಿರುವ ನಿಮ್ಮ ನಾಯಕ ಶ್ರೀ ರಾಹುಲ್ ಗಾಂಧಿಯವರಿಗೆ ಕರುನಾಡಿನ ನಿರುದ್ಯೋಗಿ ಯುವಕರ ಆಕ್ರಂದನ ಏಕೆ ಕೇಳಿಸುತ್ತಿಲ್ಲ?
ಜೆನ್ ಝೀ ಸಮೂಹದ ಭವಿಷ್ಯಕ್ಕೆ ಕಳೆದ 3 ವರ್ಷಗಳಿಂದ ನಿರಂತರ ಕಲ್ಲು ಹಾಕುತ್ತಿರುವ ನಿಮ್ಮ ಸರ್ಕಾರದ ವಿರುದ್ಧ ಈಗಾಗಲೇ ಬಹುದೊಡ್ಡ ಮಟ್ಟದಲ್ಲಿ ನಿರುದ್ಯೋಗಿ ಯುವಸಮೂಹ ದನಿಯೆತ್ತಿ ಬೀದಿಗಿಳಿದು ಹೋರಾಟ ನಡೆಸಿದೆ.
ಆದಾಗ್ಯೂ ಕಣ್ಣು, ಕಿವಿ, ಹೃದಯ ಇಲ್ಲದ ನಿಮ್ಮ ಸರ್ಕಾರದಲ್ಲಿ, ನಿಮ್ಮ ಕೈಯಲ್ಲೇ, ನಿಮ್ಮ ಅಧೀನದಲ್ಲೇ ಇರುವ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕುರಿತು ಮೊದಲು ಕಾಳಜಿ ಮತ್ತು ಬದ್ಧತೆ ತೋರಿ, ಇಲ್ಲದಿದ್ದಲ್ಲಿ ನಿಮ್ಮದು ಕೇವಲ ಮೊಸಳೆ ಕಣ್ಣೀರಿನ ಮಾತುಗಳು ಎನ್ನುವುದನ್ನು ಕನ್ನಡಿಗರು ಅರ್ಥಮಾಡಿಕೊಳ್ಳಬಲ್ಲರು! ಎಂದು ಸಿಎಂ ವಿರುದ್ಧ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.




