Hubli News: ಸಚಿವ ಸಂತೋಷ್ ಲಾಡ್ ಕಾರಿಗೆ ಡ್ರೈವರ್ ಆದ ಜಿಲ್ಲಾಧಿಕಾರಿ

Hubli News: ಸಾಮಾನ್ಯವಾಗಿ ಸಚಿವರು ಕಾರಿನಲ್ಲಿ ಕುಳಿತು ಪ್ರಯಾಣ ಮಾಡೋದು ಸಹಜ. ಆದ್ರೆ ಧಾರವಾಡದಲ್ಲಿ ಸಚಿವರ ಕಾರಿಗೇ ಜಿಲ್ಲಾಧಿಕಾರಿಗಳು ಚಾಲಕರಾಗಿದ್ದಾರೆ. ಸಚಿವ ಸಂತೋಷ್ ಲಾಡ್ ಅವರನ್ನು ಪಕ್ಕದ ಸೀಟಿನಲ್ಲಿ ಕೂರಿಸಿಕೊಂಡು ಜಿಲ್ಲಾಧಿಕಾರಿ ಆರ್. ಸ್ನೇಹಲ್ ಕಾರು ಚಾಲನೆ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ನಡೆದ ಈ ಅಪರೂಪದ ಸನ್ನಿವೇಶ ಎಲ್ಲರ ಗಮನ ಸೆಳೆದಿದೆ. ಈ ಕುರಿತ ವರದಿ ಇಲ್ಲಿದೆ.

ಧಾರವಾಡದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆ ಒಂದು ಅಪರೂಪದ ದೃಶ್ಯ ಕಂಡುಬಂದಿದೆ.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮುಗಿದ ಬಳಿಕ ಸಚಿವ ಸಂತೋಷ್ ಲಾಡ್ ಮತ್ತು ಜಿಲ್ಲಾಧಿಕಾರಿ ಆರ್. ಸ್ನೇಹಲ್ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಆದರೆ ಇಲ್ಲಿ ವಿಶೇಷ ಏನೆಂದರೆ, ಸಚಿವರ ಕಾರಿನ ಸ್ಟೇರಿಂಗ್ ಹಿಡಿದಿದ್ದು ಸ್ವತಃ ಜಿಲ್ಲಾಧಿಕಾರಿ ಆರ್. ಸ್ನೇಹಲ್ ಅವರೇ.

ಸಚಿವ ಸಂತೋಷ್ ಲಾಡ್ ಅವರನ್ನು ಪಕ್ಕದ ಸೀಟಿನಲ್ಲಿ ಕೂರಿಸಿಕೊಂಡು ಜಿಲ್ಲಾಧಿಕಾರಿಗಳು ಕಾರು ಚಾಲನೆ ಮಾಡಿದ್ದಾರೆ. ಇನ್ನು ಪ್ರಯಾಣದ ವೇಳೆ ಸಚಿವ ಸಂತೋಷ್ ಲಾಡ್ ಅವರು ಜಿಲ್ಲಾಧಿಕಾರಿಗಳ ಪಕ್ಕದಲ್ಲೇ ಕುಳಿತು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ್ದಾರೆ.

ಸಾಮಾನ್ಯವಾಗಿ ಸಚಿವರು ಅಧಿಕಾರಿಗಳ ವಾಹನದಲ್ಲಿ ಪ್ರಯಾಣಿಸುವುದನ್ನು ನೋಡಿರುತ್ತೇವೆ. ಆದರೆ ಇಲ್ಲಿ ಜಿಲ್ಲಾಧಿಕಾರಿಗಳೇ ಸಚಿವರ ಕಾರು ಚಾಲನೆ ಮಾಡಿರುವುದು ವಿಶೇಷ. ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಬಳಿಕ ಕಂಡುಬಂದ ಈ ಅಪರೂಪದ ಸನ್ನಿವೇಶ ಇದೀಗ ಸಾರ್ವಜನಿಕರ ಗಮನ ಸೆಳೆದಿದೆ.

About The Author