ಯೋಗಿ ಸರ್ಕಾರದ ಬಂಪರ್ ಗಿಫ್ಟ್ – ಉಚಿತ ಗ್ಯಾಸ್ ಸಿಲಿಂಡರ್ ಘೋಷಣೆ!

ಉತ್ತರ ಪ್ರದೇಶದ ಜನರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಭರ್ಜರಿ ದೀಪಾವಳಿ ಗಿಫ್ಟ್ ಸಿಕ್ಕಿದೆ! ಹೌದು, ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಬಡ ಕುಟುಂಬಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿರುವ ಯೋಗಿ ಸರ್ಕಾರ, ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬರುವ ಅರ್ಹ ಫಲಾನುಭವಿಗಳಿಗೆ ದೀಪಾವಳಿ ಹಾಗೂ ಹೋಳಿ ಹಬ್ಬದ ಸಂದರ್ಭದಲ್ಲಿ ತಲಾ ಒಂದು ಉಚಿತ ಎಲ್‌ಪಿಜಿ ಸಿಲಿಂಡರ್ ನೀಡುವುದಾಗಿ ಘೋಷಿಸಿದೆ.

ಮಂಗಳವಾರ ರಾಜ್ಯದ ಕೋಟ್ಯಂತರ ಫಲಾನುಭವಿಗಳಿಗೆ ಎಲ್‌ಪಿಜಿ ಸಿಲಿಂಡರ್ ಮರುಪೂರಣದ ಸಬ್ಸಿಡಿ ವಿತರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಈ ಮಹತ್ವದ ಯೋಜನೆಗಾಗಿ ರಾಜ್ಯ ಸರ್ಕಾರ ಬರೋಬ್ಬರಿ ಒಂದು ಸಾವಿರದ ಐದು ನೂರು ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ ಎಂದು ತಿಳಿಸಿದರು.

ಇದೇ ವೇಳೆ ಗ್ಯಾಗೂಸ್ ಸಿಲಿಂಡರ್ ಬೆಲೆ ಹಾ ಸಬ್ಸಿಡಿ ವಿವರ ನೀಡಿದ ಅವರು, ಒಂದು ಸಿಲಿಂಡರ್ ಬೆಲೆ 983 ರೂಪಾಯಿ ಇದ್ದು, ಕೇಂದ್ರ ಸರ್ಕಾರ 335 ರೂಪಾಯಿ ಸಬ್ಸಿಡಿ ನೀಡುತ್ತಿದೆ. ಉಳಿದ ಹಣವನ್ನು ಬಡವರು ಪಾವತಿಸಬೇಕಿತ್ತು. ಆದ್ರೆ ಈಗ ರಾಜ್ಯ ಸರ್ಕಾರವೇ ಉಚಿತ ಸಿಲಿಂಡರ್ ನೀಡುತ್ತಿರುವುದರಿಂದ, ಆ ಉಳಿತಾಯದ ಹಣದಲ್ಲಿ ಜನರು ಹಬ್ಬಕ್ಕೆ ಸಿಹಿತಿಂಡಿ ಹಾಗೂ ಹಣತೆಗಳನ್ನು ಖರೀದಿಸಿ ಸಂತೋಷದಿಂದರಬಹುದು ಎಂದರು.

ಹಿಂದಿನ ಕಾಂಗ್ರೆಸ್ ಆಡಳಿತವನ್ನೂ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಯೋಗಿ ಆದಿತ್ಯನಾಥ್, ಅಂದು ಒಂದು ಗ್ಯಾಸ್ ಸಂಪರ್ಕ ಪಡೆಯಲು ಜನರು ಪಡುತ್ತಿದ್ದ ಪಾಡನ್ನು ನೆನಪಿಸಿದರು. ಆದ್ರೆ ಇಂದು ನಮ್ಮ ಸರ್ಕಾರ ಬಡವರ ಮನೆಗಳಿಗೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಿಕೊಟ್ಟಿದೆ ಎಂದು ಹೇಳುವ ಮೂಲಕ ಇದುವೇ ನಿಜವಾದ ‘ಉತ್ತಮ ಆಡಳಿತ’ ಎಂದು ಬಣ್ಣಿಸಿದರು.

About The Author