Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಆಟ ಮುಗೀತು. ಇನ್ನು ಏನಿದ್ರೂ ಕಾಂಗ್ರೆಸ್ ಆಟ ಎಂದಿದ್ದಾರೆ.
ಮುಂದಿನ ಚುನಾವಣೆ ಬಗ್ಗೆ ಮಾತನಾಡಿರುವ ನಲಪಾಡ್ 2029ರ ವೇಳೆಗೆ ಬಿಜೆಪಿ ಖೇಲ್ ಖತಂ, ಕಾಂಗ್ರೆಸ್ ಖೇಲ್ ಶುರು. ಇದನ್ನು ಬರೆದಿಟ್ಟುಕ“ಳ್ಳಿ ಎಂದು ನಲಪಾಡ್ ಹೇಳಿದ್ದಾರೆ. ಅಲ್ಲದೇ ನೂರಕ್ಕೆ ನೂರು ಪ್ರತಿಶತ ರಾಹುಲ್ ಗಾಂಧಿನೇ ಪ್ರಧಾನಿಯಾಗುತ್ತಾರೆ ಎಂದು ನಲಪಾಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ನನಗೆ ಈಗಾಗಲೇ ಟಿಕೇಟ್ ಸಿಕ್ಕಿದ್ದರೆ, ನಾನು ಎಂಎಲ್‌ಎ ಆಗಿರ್ತಿದ್ದೆ. ಅವಕಾಶ ಸಿಕ್ಕಿ ಎಲೆಕ್ಷನ್ ನಿಂತರೆ ಗೆದ್ದೇ ಗೆಲ್ತೀನಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ನಲಪಾಡ್. ಇನ್ನೂ ಟಿಕೇಟ್ ಸಿಗದಿರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿರುವ ನಲಪಾಡ್, ನನಗೆ ಅರ್ಹತೆ ಇಲ್ಲಾ ಅಂತಾ ನನಗೆ ಟಿಕೇಟ್ ನೀಡಲಿಲ್ಲಾ ಅನ್ನೋದು ಸುಳ್ಳು. ನನಗಿನ್ನೂ ವಯಸ್ಸಿದೆ. ಹಾಾಗಾಗಿ ಸ್ವಲ್ಪ ತಾಳ್ಮೆಯಿಂದ ಇರಲು ಹೇಳಿದ್ದಾರೆಂದು ನಲಪಾಡ್ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




