Movie News: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ರಾಮಾಯಣ ಭಾಗ 1 ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದು, ರಣ್ಬೀರ್ ಮತ್ತು ಯಶ್ ಅಭಿನಯಕ್ಕೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದಾರೆ.
ಬೆಳಗ್ಗಿನ ಜಾವದಿಂದಲೇ ದೇಶ ವಿದೇಶಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದ್ದು, ಅತ್ಯುತ್ತಮ ರೆಸ್ಪಾನ್ಸ್ ಕಂಡಿದೆ. ನಿರ್ದೇಶಕ ನಿತೇಶ್ ತಿವಾರಿ ಅವರ ನಿರ್ದೇಶನದ ಸಿನಿಮಾ ಇದಾಗಿದ್ದು, 4 ಸಾವಿರ ಕೋಟಿ ರೂಪಾಯಿಗಳ ಬಜೆಟ್ನಲ್ಲಿ ಎರಡು ಭಾಗಗಳಾಗಿ ವಿಂಗಡಿಸಿ ಸಿನಿಮಾ ನಿರ್ಮಿಸಲಾಗಿದೆ. ಇದೀಗ ಭಾಗ 1 ರಿಲೀಸ್ ಆಗಿದ್ದು, ಮುಂದಿನ ವರ್ಷ ಅಂದ್ರೆ 2028ಕ್ಕೆ ದೀಪಾವಳಿ ಸಮಯದಲ್ಲೇ ಭಾಗ 2 ತೆರೆಕಾಣಲಿದೆ.
100ಕ್ಕೂ ಹೆಚ್ಚು ದೇಶಗಳಲ್ಲಿ 50 ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಲಂ ಸೇರಿ ಹಲವು ಭಾಷೆಗಳಲ್ಲಿ ಸಿನಿಮಾ ಕಾಣಬಹುದಾಗಿದೆ.
ರಣಬೀರ್ ಕಪೂರ್ ಇದರಲ್ಲಿ ರಾಮನ ಪಾತ್ರ ಮಾಡಿದ್ದರೆ, ಯಶ್ ರಾವಣನ ಪಾತ್ರ ಮಾಡಿದ್ದಾರೆ, ಸೌತ್ ಸಿನಿ ತಾರೆ ಸಾಯಿ ಪಲ್ಲವಿ ಸೀತೆಯಾಗಿ ಮಿಂಚಿದ್ದಾರೆ. ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್, ಕೈಕೇಯಿಯಾಗಿ ಲಾರಾದತ್ತಾ, ಶೂರ್ಪನಖಿಯಾಗಿ ರಾಕುಲ್ ಪ್ರೀತ್ ಸಿಂಗ್ ಬಣ್ಣ ಹಚ್ಚಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತರಾದ ಎ.ಆರ್.ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇನ್ನು ವಿಶೇಷ ಸಂಗತಿ ಅಂದ್ರೆ, ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಯಶ್ಗೆ ರಾವಣ ಪಾತ್ರ ನೀಡಬಾರದಿತ್ತು. ಯಾಕಂದ್ರೆ ಜನ ಪ್ರಪ್ರಥಮ ಬಾರಿಗೆ ರಾಮಾಯಣವನ್ನು ರಾಮನಿಗಿಂತ ಹೆಚ್ಚು ರಾವಣನನ್ನು ನೋಡಲು ಕಾಯುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಅಲ್ಲದೇ ಸಿನಿಮಾ ರಿಲೀಸ್ಗೂ ಮುನ್ನ ರಾವಣ ರಚಿತ ಶಿವ ತಾಂಡವ ಸ್ತ್ರೋತದ ಹಾಡು ರಿಲೀಸ್ ಆಗಿದ್ದು, ಜನ ಅದಾಗಲೇ ಆ ಹಾಡಿನಲ್ಲೇ ಯಶ್ ನಟನೆಗೆ ಫಿದಾ ಆಗಿ ಹೋಗಿದ್ದರು.




