ನವೆಂಬರ್ 10ರೊಳಗೆ ಈ ಕೆಲಸ ಮಾಡದಿದ್ದಲ್ಲಿ, ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು ಹುಷಾರ್..

News: ರಾಜ್ಯದ ಪಡಿತರ ಚೀಟಿದಾರರು ತಮ್ಮ ಇ-ಕೆವೈಸಿ ಪ್ರಕ್ರಿಯೆ ಪೂರ್ಣವಾಗಿಸಲು ನವೆಂಬರ್ 10 ಅಂತಿಮ ದಿನವಾಗಿದೆ. ಇನ್ನು ಇ ಕೆವೈಸಿ ಮಾಡಿಸದೇ ಬಾಕಿ ಉಳಿದಿರುವ ಎಲ್ಲಾ ಪಡಿತರ ಚೀಟಿದಾರರು ಈ ಗಡುವಿನ“ಳಗೇ ತಪ್ಪದೇ ಇಕೆವೈಸಿ ಮಾಡಿಸಬೇಕಿದೆ.

ರಾಜ್ಯದಲ್ಲಿ ಮರು ಇ ಕೆವೈಸಿ 2.67 ಕೋಟಿಗೂ ಅಧಿಕ ಪಡಿತರ ಚೀಟಿ ಫಲಾನುಭವಿಗಳ ಪೈಕಿ, ನವೆಂಬರ್ 3ರ ವೇಳೆಗೆ 2.26 ಕೋಟಿಗೂ ಹೆಚ್ಚು ಜನರು ಈಗಾಗಲೇ ಈ ಕೆವೈಸಿ ಪೂರ್ಣಿಗ“ಳಿಸಿದ್ದಾರೆ. ಆದರೆ ಇನ್ನೂ ಸುಮಾರು 41.33 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಇ ಕೆವೈಸಿ ಮಾಡಿಸುವುದು ಬಾಕಿ ಇದೆ. ಈಗಾಗಲೇ 1 ಬಾರಿ ಕಾಲಾವಕಾಶವನ್ನು ವಿಸ್ತರಿಸಲಾಗಿದ್ದು, ನವೆಂಬರ್ 10ರ ನಂತರ ಯಾವುದೇ ಕಾರಣಕ್ಕೂ ಮತ್ತೆ ದಿನಾಂಕ ವಿಸ್ತರಿಸುವುದಿಲ್ಲವೆಂದು ಇಲಾಖೆ ಸ್ಪಷ್ಟಪಡಿಸಿದೆ.

ಇ ಕೆವೈಸಿ ಮಾಡಿಸುವುದು ಬಾಕಿ ಇರುವ ಫಲಾನುಭವಿಗಳು ಅನ್ನಸೇವೆ ಆ್ಯಪ್ ಮೂಲಕ ಸ್ವತಃ ಖುದ್ದಾಗಿ, ಅಥವಾ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಆಹಾರ ತಂತ್ರಾಂಶದ ಮೂಲಕ ಕಡ್ಡಾಯವಾಗಿ, ಇ ಕೆವೈಸಿ ಪೂರ್ಣಗ“ಳಿಸಬೇಕಿದೆ. ನಿಯಮಿತ ಸಮಯದಲ್ಲಿ ಪ್ರಕ್ರಿಯೆ ಮುಗಿಸದಿದ್ದರೆ, ನಿಯಮಾನುಸಾರ ಸೂಕ್ತ ಕ್ರಮ ಕೈಗ“ಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

About The Author