ಹಾಲಿನ ದರದಲ್ಲಿ ಮತ್ತೆ ಏರಿಕೆ – ನಾಳೆಯಿಂದಲೇ ಹೊಸ ದರ ಜಾರಿ!

ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಹೌದು, ಮದರ್ ಡೈರಿ ಸಂಸ್ಥೆ ಹಾಲಿನ ದರವನ್ನು ಸಹ ಪ್ರತಿ ಲೀಟರ್‌ಗೆ 2ರಿಂದ 4 ರೂಪಾಯಿವರೆಗೆ ಹೆಚ್ಚಿಸಿದೆ. ನಾಳೆಯಿಂದಲೇ ಈ ಹಾಲಿನ ಹೊಸ ದರ ಜಾರಿಗೆ ಬರಲಿದ್ದು, ಯಾವ ಹಾಲಿನ ಬೆಲೆ ಎಷ್ಟಾಗಿದೆ ಅಂತ ಈಗ ನೋಡೋಣ ಬನ್ನಿ.

ಹಾಲು ಸಂಗ್ರಹಣೆ, ಪಶು ಆಹಾರ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ‘ಮದರ್ ಡೈರಿ’ ಈ ನಿರ್ಧಾರ ಕೈಗೊಂಡಿದೆ ಅಂತ ಹೇಳಲಾಗ್ತಿದೆ. ರೈತರಿಂದ ಹಾಲು ಖರೀದಿಸುವ ದರವೂ ಹೆಚ್ಚಾಗಿರುವುದರಿಂದ ಹೆಚ್ಚುವರಿ ವೆಚ್ಚದ ಒಂದು ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲಾಗಿದೆ.

ಇನ್ನು ಇದರ ಜೊತೆಗೆ ‘ಮದರ್ ಡೈರಿ ಹಾಲಿನ ಹೊಸ ದರಗಳ ವಿವರ ನೋಡೋದಾದ್ರೆ ‘ಫುಲ್ ಕ್ರೀಮ್ ಹಾಲಿನ ಬೆಲೆ 72ರಿಂದ 76 ರೂಪಾಯಿಗೆ ಏರಿಕೆಯಾಗಿದೆ. ಟೋನ್ಡ್ ಹಾಲು 60ರಿಂದ 62 ರೂಪಾಯಿಗೆ, ಬಲ್ಕ್ ಟೋನ್ಡ್ ಹಾಲು 58ರಿಂದ 60 ರೂಪಾಯಿಗೆ ಹೆಚ್ಚಾಗಿದೆ. ಡಬಲ್ ಟೋನ್ಡ್ ಹಾಲು 54ರಿಂದ 56 ರೂಪಾಯಿಗೆ ಹಾಗೂ ಹಸುವಿನ ಹಾಲು 62ರಿಂದ 65 ರೂಪಾಯಿಗೆ ಏರಿಕೆಯಾಗಿದೆ.

ನವೆಂಬರ್ 12ರಿಂದ ಈ ಹೊಸ ದರಗಳು ಜಾರಿಗೆ ಬರಲಿದ್ದು, ಸದ್ಯ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದ ಗ್ರಾಹಕರಿಗೆ ಮಾತ್ರ ಈ ಬೆಲೆ ಏರಿಕೆ ಅನ್ವಯವಾಗಲಿದೆ. ಕರ್ನಾಟಕದಲ್ಲಿ ದರ ಬದಲಾವಣೆಯಾಗುತ್ತದೆಯೇ ಎಂಬುದನ್ನು ಮುಂಬರುವ ದಿನಗಳಲ್ಲಿ ಕಾದು ನೋಡಬೇಕು.

About The Author