Recipe: ಬೇಕಾಗುವ ಸಾಮಗ್ರಿ: ಚೆನ್ನಾಗಿ ವಾಶ್ ಮಾಡಿದ ಪಾಲಕ್, ನೆನೆಸಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿದ ಕಪ್ಪು ಕಡಲೆ, 1 ಕಪ್ ಮೊಸರು, ಶುಂಠಿ- ಬೆಳ್ಳುಳ್ಳಿ ಪೆಸ್ಟ್, ಸ್ವಲ್ಪ ಜೀರಿಗೆ, 1 ಈರುಳ್ಳಿ, 4ರಿಂದ 5 ಸ್ಪೂನ್ ಎಣ್ಣೆ, 1 ಸ್ಪೂನ್ ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಖಾರದ ಪುಡಿ, ಸ್ವಲ್ಪ ಅರಿಶಿನ, ಉಪ್ಪು.
ಮಾಡುವ ವಿಧಾನ: ಪಾಲಕ್ ನ್ನು ಕುದಿಯುವ ನೀರಿಗೆ ಹಾಕಿ, 2 ನಿಮಿಷ ಮಂದ ಉರಿಯಲ್ಲಿ ಬೇಯಿಸಿ, ಮತ್ತೆ ತೆಗೆದು ಐಸ್ ನೀರಿಗೆ ಹಾಕಿ, ಕ್ಲೀನ್ ಮಾಡಿ. ಈಗ ಮಿಕ್ಸಿ ಜಾರ್ಗೆ ಪಾಲಕ್ ಮತ್ತು ಮೊಸರು ಹಾಕಿ ರುಬ್ಬಿ.
ಈ ಪ್ಯಾನ್ ಬಿಸಿ ಮಾಡಿ ಎಣ್ಣೆ, ಜೀರಿಗೆ, ಈರುಳ್ಳಿ, ಶುಂಠಿ- ಬೆಳ್ಳುಳ್ಳಿ ಪೆಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ. ಈಗ ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಧನಿಯಾಪುಡಿ, ಜೀರಿಗೆ ಪುಡಿ ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ರುಬ್ಬಿ ರೆಡಿ ಮಾಡಿದ ಮಿಶ್ರಣ ಹಾಕಿ ಬೇಯಿಸಿ.
ಪಾಲಕ್ ಹಸಿ ವಾಸನೆ ಹೋಗುವವರೆಗೂ ಬೇಯಿಸಬೇಕು. ನಂತರ ಬೇಯಿಸಿದ ಕಡಲೆ ಮತ್ತು ಸ್ವಲ್ಪ ಉಪ್ಪು ಹಾಕಿ ಮತ್ತೆ ಮುಚ್ಚಳ ಮುಚ್ಚಿ ಮಂದ ಉರಿಯಲ್ಲಿ ಸ್ವಲ್ಪ ಬೇಯಿಸಿ.




