Recipe: ಬೇಕಾಗುವ ಸಾಮಗ್ರಿ: ಬೇಯಿಸಿದ 3 ಆಲೂಗಡ್ಡೆ, 2 ಸ್ಪೂನ್ ಕಾರ್ನ್ ಫ್ಲೋರ್, 1 ಸ್ಪೂನ್ ಚಿಲ್ಲಿ ಫ್ಲೇಕ್ಸ್, ಉಪ್ಪು, ಪೆಪ್ಪರ್ ಪುಡಿ, ಕೊತ್ತೊಂಬರಿ ಸೊಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ. ನಂತರ ಅದಕ್ಕೆ ಕಾರ್ನ್ ಫ್ಲೋರ್, ಉಪ್ಪು, ಚಿಲ್ಲಿ ಫ್ಲೇಕ್ಸ್, ಪೆಪ್ಪರ್ ಪುಡಿ, ಕೊತ್ತೊಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
ನಂತರ ಸಣ್ಣ ಸಣ್ಣ ತುಂಡು ತೆಗೆದು ಅದಕ್ಕೆ 1 ಶೇಪ್ ನೀಡಿ, ಅಥವಾ ಚೌಕಾಕಾರ ನೀಡಿ, ಕಾದ ಎಣ್ಣೆಯರಲ್ಲಿ ಕರೆದರೆ ಆಲೂ ಬೈಟ್ಸ್ ರೆಡಿ. ಅಥವಾ ಕಾರ್ನ್ ಫ್ಲೋರ ನೀರಿಗೆ ಹಾಕಿ ಪೇಸ್ಟ್ ತಯಾರಿಸಿ, ಮಿಶ್ರಣವನ್ನು ಇದರಲ್ಲಿ ಅದ್ದಿ, ಬ್ರೆಡ್ ಕ್ರಂಬ್ಸ್ನಲ್ಲಿ ಕೋಟಿಂಗ್ ಮಾಡಿ, ಕಾದ ಎಣ್ಣೆಯಲ್ಲಿ ಕರೆಯಬಹುದು. ಟೋಮೆಟೋ ಸಾಸ್ ಜತೆ ಈ ಸ್ನ್ಯಾಕ್ಸ್ ತಿನ್ನಬಹುದು.




