Web News: ಬಿಸ್ಕೇಟ್‌ನಲ್ಲಿ ಹೋಲ್ ಇರಲು ಕಾರಣವೇನು..? ಇದು ಡಿಸೈನಾ ಅಥವಾ ಮಾರಾಟ ತಂತ್ರಾನಾ..?

Web News: ನಾವು ನೀವು ತಿನ್ನುವ ಕೆಲವು ಬಿಸ್ಕೇಟ್‌ನಲ್ಲಿ ಹೋಲ್ ಇರುವುದನ್ನು ನೀವು ಕಂಡಿದ್ದೀರಿ. ಇದು ನಿಮ್ಮ ಕಣ್ಣಿಗೆ ಬರೀ ಡಿಸೈನ್, ಶೇಪ್ ರೀತಿ ಕಾಣಬಹುದು. ಆದರೆ ಇಂದು 1 ಬ್ಯುಸಿನೆಸ್ ತಂತ್ರ. ಅದು ಹೇಗೆ ಅಂತೀರಾ.. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನೀವು ಪೂರಿ ಮಾಡುವಾಗ, ಪೂರಿ ಲಟ್ಟಿಸಿ ಕಾದ ಎಣ್ಣೆಗೆ ಹಾಕಿದ್ರೆ, ಪೂರಿ ಉಬ್ಬುತ್ತದೆ. ಕಲವು ಬಾರಿ ಪೂರಿ ಕ್ರ್ಯಾಕ್ ಆಗಿ, ಅದರಲ್ಲಿ ಎಣ್ಣೆ ಸೇರುವ ಸಂಭವವೂ ಇರುತ್ತದೆ. ಆಗ ಪೂರಿ ಹೆಚ್ಚು ಅನ್‌ಹೆಲ್ದಿಯಾಗಿರುತ್ತದೆ. ಹೋಟೇಲ್‌ನಲ್ಲಿ ಇಂಥ ಪೂರಿಯನ್ನು ಖರೀದಿಸಲು ಯಾರೂ ಬಯಸುವುದಿಲ್ಲ.

ಅದೇ ರೀತಿ ಬಿಸ್ಕೀಟ್‌ನ್ನು ಬೇಕ್ ಮಾಡಿದಾಗ, ಬಿಸ್ಕೀಟ್ ಬ್ರೇಕ್ ಆಗುವ ಸಂಭವವಿರುತ್ತದೆ. ಹಾಗಾಗಿ ಬಿಸ್ಕೀಟ್‌ನಲ್ಲಿ ಹೋಲ್ ಮಾಡಲಾಗುತ್ತದೆ. ಈ ಹೋಲ್‌ಗಳನ್ನು ಟೆಕ್ನಿಕಲ್ ಭಾಷೆಯಲ್ಲಿ ಡೋಕರ್ಸ್ ಎಂದು ಕರೆಯುತ್ತಾರೆ. ಬಿಸ್ಕೀಟ್‌ನಲ್ಲಿ ಈ ರೀತಿ ಡೋಕರ್ಸ್ ಇಲ್ಲದಿದ್ದರೆ, ಬಿಸ್ಕಿಟ್‌ಗಳು ಉಬ್ಬುತ್ತದೆ. ಮೆತ್ತಗಾಗುತ್ತದೆ. ತೇವಾಂಶ ಬಿಸ್ಕಿಟ್‌ನಲ್ಲೇ ಉಳಿಯುತ್ತದೆ. ಅಥವಾ ಬಿಸ್ಕೇಟ್ ತುಂಡು ತುಂಡಾಗುತ್ತದೆ. ಇದರಿಂದ ಉದ್ಯಮದಲ್ಲಿ ಲಾಸ್ ಆಗುತ್ತದೆ.

ಅದೇ ಬಿಸ್ಕೀಟ್‌ನಲ್ಲಿ ಹೋಲ್ ಇದ್ದಾಗ, ತೇವಾಂಶ ಅಲ್ಲೇ ಉಳಿಯುವುದಿಲ್ಲ. ಅದರಲ್ಲಿರುವ ಗಾಳಿ ಆಚೆ ಹೋಗುತ್ತದೆ. ಇದರಿಂದ ಬಿಸ್ಕತ್ ತುಂಡಾಗುವ ಭಯವಿರುವುದಿಲ್ಲ. ಬಿಸ್ಕೀಟ್‌ನಲ್ಲಿ ಆ ಕ್ರಂಚಿ, ಕ್ರಿಸ್ಪಿನೆಸ್ ಹಾಗೇ ಇರುತ್ತದೆ. ಉದ್ಯಮದಲ್ಲಿ ಲಾಸ್ ಕೂಡ ಆಗುವುದಿಲ್ಲ. ಇದೇ ಕಾರಣಕ್ಕೆ ಬಿಸ್ಕೇಟ್‌ನಲ್ಲಿ ಹೋಲ್ ಇರುತ್ತದೆ.

About The Author