Political News: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಕೃಪಾ ಆಳ್ವಾ ವಿಚಾರಣೆ ನಡೆಸಿದ್ದಾರೆ.
ಆದರೆ ವಿಚಾರಣೆ ವೇಳೆ ಆರೋಪಿ ಕೃಪಾ ಆಳ್ವಾ, ತಮ್ಮ ಫೋನ್ ನೀಡಲು ನಿರಾಕರಿಸಿದ್ದಾರೆ. ಕೇಸ್ ವಿಚಾರ ಆಚೆ ಬಂದಾಗ, ವಿದೇಶಕ್ಕೆ ಹೋಗಿದ್ದ ಕೃಪಾ, ಕೆಲ ದಿನಗಳ ಹಿಂದೆ ಕಾಂಗ್ರೆಸ್ನಿಂದ ಉಚ್ಛಾಟನೆಯಾಗಿದ್ದಾರೆ. ಇದೀಗ ಕೃಪಾರನ್ನು ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ ಪರಿಶೀಲನೆಗಾಗಿ ಕೃಪಾರ ಫೋನ್ ಕೇಳಲಾಗಿದೆ. ಆದರೆ ಕೃಪಾ ಫೋನ್ ನೀಡಲು ನಿರಾಕರಿಸಿದ್ದಾರೆ.
ಅಲ್ಲದೇ ಫೋನ್ ನೀಡಲೇಬೇಕು ಎಂದು ಹೇಳಿದ್ದಕ್ಕೆ, ಬುಧವಾರ ಫೋನ್ ನೀಡುತ್ತೇನೆ ಎಂದು ಸಬೂಬು ಹೇಳಿ ಕಾಲ ಹರಣ ಮಾಡುತ್ತಿದ್ದಾರೆಂದು ಪೋಲೀಸರು ಕೃಪಾ ವಿರುದ್ಧ ಆರೋಪ ಮಾಡಿದ್ದಾರೆ.
ಇನ್ನು ಕೃಪಾ ಆಳ್ವಾ, ತಾನು ಯಾವುದೇ ಸ್ಟಿಂಗ್ ಆಪರೇಷನ್ನಲ್ಲಿ ಭಾಗಿಯಾಗಿಲ್ಲ. ತಮ್ಮ ಮೇಲೆ ಸುಖಾಸುಮ್ಮನೆ ಆರೋಪ ಮಾಡಲಾಗುತ್ತಿದೆ. ಆ ವೇಳೆ ನಾನು ಆ ಸ್ಥಳದಲ್ಲಿ ಇದ್ದಿದ್ದು ನಿಜ. ಆದರೆ ಆ ವೀಡಿಯೋ ಮಾಡಿದ್ದು ಯಾರು..? ಅಲ್ಲೇನು ನಡೆಯುತ್ತಿತ್ತು ಎಂದು ನನಗೆ ತಿಳಿದೇ ಇರಲಿಲ್ಲ ಎಂದು ಕೃಪಾ ಆಳ್ವಾ ತಮ್ಮ ಕೃತ್ಯವನ್ನು ಸಮರ್ಥಿಸಿಕ“ಂಡಿದ್ದಾರೆ.




