Political News: ತಾವು ದತ್ತು ಪುತ್ರ ಎಂಬ ಕಾರಣಕ್ಕೆ ಕಾಂಗ್ರೆಸ್ ಮಾಡುತ್ತಿರುವ ಟೀಕೆಗೆ ಬಿಜೆಪಿ ಸಂಸದ ಯದುವೀರ್ ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ. ಹೌದು ನಾನು ದತ್ತು ಪುತ್ರನೇ ಏನಿವಾಗಾ ಎಂದು ಕಾಂಗ್ರೆಸ್ಸಿಗರಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಾನು ದತ್ತು ಪುತ್ರ ಎನ್ನುವುದು ವಾಸ್ತವ. ಆದರೆ ಭಾರತದ ಸಂವಿಧಾನದ ಅಡಿಯಲ್ಲಿ ಎಲ್ಲರೂ ಪ್ರಜೆಗಳೇ. ಯಾರಿಗೂ ಇಲ್ಲಿ ವಿಶೇಷ ಸ್ಥಾನವಿಲ್ಲ ಎಂದು ಯದುವೀರ್ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ರಾಜಕೀಯದಲ್ಲಿ ವೈಯಕ್ತಿಕ ಟೀಕೆಗಳಿಗೆ ಆಸ್ಪದ ನೀಡಬಾರದು ಎಂದು ಯದುವೀರ್ ಹೇಳಿದ್ದಾರೆ.
ರಾಜ್ಯದ ಜನರು ಮತ್ತು ನಮ್ಮ ನಮ್ಮ ಕ್ಷೇತ್ರದ ಜನರು ರಾಜಕೀಯದಲ್ಲಿ ಸುಧಾರಣೆ ಬಯಸುತ್ತಿದ್ದಾರೆ. ನಾವೆಲ್ಲರೂ ಸಮಸ್ಯೆ, ನೀತಿ, ನಿಯಮದ ಆಧಾರದ ಮೇಲೆ ಚರ್ಚಿಸಬೇಕು. ವೈಯಕ್ತಿಕ ದಾಳಿಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಯದುವೀರ್ ಕರೆ ನೀಡಿದ್ದಾರೆ.
ಇನ್ನು ಬಿಜೆಪಿಗರು ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲವೆಂದು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪಕ್ಕೆ ತಿರುಗೇಟು ನೀಡಿರುವ ಯದುವೀರ್, ಸೋನಿಯಾ ಗಾಂಧಿಯವರ ಪುಸ್ತಕ ಅಥವಾ ಪತ್ರಿಕೆಗಳನ್ನು ಓದಿದರೆ ಅವರಿಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಕಾಂಗ್ರೆಸ್ ನಾಯಕರು ಕ್ಷೇತ್ರಗಳಲ್ಲಿ ಏನಾಗುತ್ತಿದೆ ಎಂದು ತಿಳಿಯಬೇಕಿದ್ದಲ್ಲಿ, ನ್ಯೂಸ್ ನೋಡಬೇಕು ಎಂದು ಯದುವೀರ್ ತಿರುಗೇಟು ನೀಡಿದ್ದಾರೆ.




