ಯಾವ ಸರ್ಕಾರ ಬರಬೇಕೆಂದು ತೀರ್ಮಾನಿಸೋದು ಜನ. ದೇವೇಗೌಡರು, ರೇವಣ್ಣ ಅಲ್ಲಾ: ಸಚಿವ ಬಾಲಕೃಷ್ಣ

Political News: Ramanagara: ಮುಂದೆ ಯಾವ ಸರ್ಕಾರ ಅಧಿಕಾರಕ್ಕೆ ಬರಬೇಕು ಅನ್ನೋದನ್ನ ಜನ ತೀರ್ವನ ಮಾಡ್ತಾರೆ ವಿನಃ ದೇವೇಗೌಡರು, ರೇವಣ್ಣ ಅಲ್ಲಾ ಅಂತಾ ಸಚಿವ ಹೆಚ್.ಸಿ.ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ.

ರಾಮನಗರದಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಅವರು, ಹೆಚ್.ಡಿ.ರೇವಣ್ಣ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕೆಲ ದಿನಗಳ ಹಿಂದೆ ನಿಶ್ಚಲಾನಂದ ಸ್ವಾಮೀಜಿಗಳು, ಸಿಎಂ ಪರ ಮಾತನಾಡಿದ್ದರು. ಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿವೃದ್ಧಿ ಪರವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗೆ ಅವರ ಕೆಲಸ ಮಾಡಲು ಬಿಡಬೇಕು. 1 ಸಮುದಾಯದವರಾಗಿ, ಅವರ ವಿರುದ್ಧ ಹೇಳಿಕೆ ನೀಡಿ, ಅವರಿಗೆ ಸಮಸ್ಯೆ ನೀಡಬಾರದು ಎಂದು ಪರೋಕ್ಷವಾಗಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹೇಳಿಕೆ ಹೆಚ್.ಡಿ.ರೇವಣ್ಣ ಪ್ರತಿಕ್ರಿಯಿಸಿ, ಸ್ವಾಮೀಜಿಗಳು ಸ್ವಾಮೀಜಿಗಳ ಕೆಲಸ ಮಾತ್ರ ಮಾಡಬೇಕು. ರಾಜಕೀಯದ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದಿದ್ದರು. ಇದೇ ಹೇಳಿಕೆಗೆ ಸಚಿವ ಹೆಚ್.ಸಿ.ಬಾಲಕೃಷ್ಣ ಇದೀಗ ತಿರುಗೇಟು ನೀಡಿದ್ದಾರೆ. ರೇವಣ್ಣ ಪರವಾಗಿ ಸ್ವಾಮೀಜಿಗಳು ಮಾತನಾಡಿದಾಗ, ಅವರಿಗೆ ಅದು ರುಚಿಸುತ್ತದೆ. ಆದರೆ ವಿರುದ್ಧ ಮಾತನಾಡಬಾರದು ಅಂತಾರೆ. ಹೇಳಲಿ ಬಿಡಿ, ಏನೂ ಮಾಡಲಾಗುವುದಿಲ್ಲ. 2028ಕ್ಕೆ ಕುಮಾರಸ್ವಾಮಿ ಸರ್ಕಾರ ಬರುತ್ತೆ ಎಂದು ರೇವಣ್ಣ ಹೇಳುತ್ತಾರೆ. ಆದರೆ ತೀರ್ಮಾನ ಮಾಡುವುದು ಜನ, ರೇವಣ್ಣ ಅಲ್ಲಾ ಅಂತಾ ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.

ಅಲ್ಲದೇ ಕೈಗಾರಿಕಾ ಸ್ಥಾಪನೆಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿಲ್ಲ ಎಂಬ ಕುಮಾರಸ್ವಾಮಿ ಆರೋಪಕ್ಕೂ ಪ್‌ರತಿಕ್ರಿಯಿಸಿರುವ ಬಾಲಕೃಷ್ಣ, ಎಲ್ಲಿ ಜಾಗ ಬೇಕೋ ಹೇಳಿ, ಯಾವ ಜಿಲ್ಲೆಯಲ್ಲಾದರೂ ಜಾಗ ನೀಡಲು ನಾವು ಸಿದ್ಧರಿದ್ದೇವೆ. ಯುವಕರು ಕುಮಾರಣ್ಣನನ್ನು ಹೆಚ್ಚು ಪ್ರೀತಿಸುತ್ತಾರೆ. ಅಂಥ ಯುವಕರಿಗೆ ಕೆಲಸ ನೀಡುವ ಜವಾಬ್ದಾರಿ ಕುಮಾರಣ್ಣಂದು ಎಂದು ಬಾಲಕೃಷ್ಣ ಟಾಂಗ್ ನೀಡಿದ್ದಾರೆ.

About The Author