ಸಿಎಂ ಸೂಚನೆಗೂ ಕಿಮ್ಮತ್ತಿಲ್ಲವೇ? KMF ವಿರುದ್ಧ ಗ್ರಾಹಕರ ಆಕ್ರೋಶ!

ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ವಿಚಾರವಾಗಿ ಜನರ ಅಸಮಾಧಾನ ಇನ್ನೂ ತಣ್ಣಗಾಗಿಲ್ಲ. ಸಾರ್ವಜನಿಕರ ವಿರೋಧದ ನಡುವೆ ಮೊಸರು ಬೆಲೆಯನ್ನ 2 ರೂಪಾಯಿ ಇಳಿಸಿ ಅಂತ ಸಿಎಂ ಡಿಕೆ ಶಿವಕುಮಾರ್ ಸೂಚನೆ ಕೊಟ್ಟು 20 ದಿನಗಳೇ ಕಳೆದಿವೆ. ಆದ್ರೂ ಕೆಎಂಎಫ್ ಇನ್ನೂ ರೇಟ್ ಇಳಿಸದೆ ಮೀನಮೇಷ ಎಣಿಸ್ತಿದೆ ಎನ್ನುವ ಮಾತುಗಳು ಹೆಚ್ಚು ಚರ್ಚೆ ಆಗ್ತಿವೆ.

ಎಸ್ ‘ಇತ್ತೀಚೆಗಷ್ಟೇ ಹಾಲಿನ ಕೊಬ್ಬಿನ ಪ್ರಮಾಣಕ್ಕೆ ತಕ್ಕಂತೆ ಪ್ರತಿ ಲೀಟರ್‌ಗೆ 8ರಿಂದ 14 ರೂಪಾಯಿವರೆಗೆ ಬೆಲೆ ಹೆಚ್ಚಿಸಲಾಗಿತ್ತು. ಇದರ ಬೆನ್ನಲ್ಲೇ ಮೊಸರಿನ ದರವನ್ನೂ ಲೀಟರ್‌ಗೆ 14 ರೂಪಾಯಿ ಹಾಗೂ ಅರ್ಧ ಲೀಟರ್‌ಗೆ 6 ರೂಪಾಯಿ ಏರಿಸಲಾಗಿತ್ತು. ಈ ದಿಢೀರ್ ಏರಿಕೆಯಿಂದ ಕಂಗಾಲಾದ ಜನರ ಒತ್ತಡಕ್ಕೆ ಮಣಿದು ಸಿಎಂ ದರ ಇಳಿಕೆಗೆ ಸೂಚಿಸಿದ್ರು. ಆದ್ರೆ ಆದೇಶ ಮಾತ್ರ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಅಂತ ಆಕ್ರೋಶ ಹೊರ ಹಾಕುತ್ತಿದ್ದಾರೆ..

ಬೆಲೆ ಕಡಿತದ ಭರವಸೆ ನೀಡಿ ವಾರಗಳೇ ಕಳೆದ್ರೂ ಜಾರಿಯಾಗದಿರೋದಕ್ಕೆ ಗ್ರಾಹಕರು ಕಿಡಿಕಾರಿದ್ದು, ಸ್ವತಃ ಸಿಎಂ ಸೂಚನೆಗೂ ಇಲಾಖೆಗಳು ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ವಾ ಅಂತ ಪ್ರಶ್ನಿಸ್ತಿದ್ದಾರೆ. ಹಾಲು, ಮೊಸರು ದಿನನಿತ್ಯದ ಅಗತ್ಯ ವಸ್ತುಗಳಾಗಿದ್ದು, ಮನಬಂದಂತೆ ರೇಟ್ ಹೆಚ್ಚಿಸಿರೋದ್ರಿಂದ ಮಧ್ಯಮ ವರ್ಗದ ತಿಂಗಳ ಬಜೆಟ್ ಏರುಪೇರಾಗಿದೆ. ಜನರು ಈ ಏರಿಕೆಗೆ ಒಗ್ಗಿಕೊಂಡು ಸುಮ್ಮನಾಗ್ತಾರೆ ಅಂತ ಸರ್ಕಾರ ಕಾಯ್ತಿದೆಯಾ ಅಂತ ಗೃಹಿಣಿಯರು ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಇದರ ಜೊತೆಗೆ ‘ಇತ್ತ ದರ ಇಳಿಕೆ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿರೋ ಕೆಎಂಎಫ್ ಆಡಳಿತಾಧಿಕಾರಿ ಎಂ.ವಿ. ವೆಂಕಟೇಶ್, ಜಿಲ್ಲಾ ಹಾಲು ಒಕ್ಕೂಟಗಳ ಜೊತೆ ಇನ್ನೂ ಚರ್ಚೆ ನಡೀತಿದೆ, ಈವರೆಗೆ ಒಮ್ಮತಕ್ಕೆ ಬರೋಕೆ ಆಗಿಲ್ಲ, ಮಾತುಕತೆ ಮುಗಿದ ಮೇಲಷ್ಟೇ ಅಂತಿಮ ನಿರ್ಧಾರ ತಗೊಳ್ತೀವಿ ಅಂದಿದ್ದಾರೆ.

About The Author