ಡಿ.1ರಿಂದ ಈ ನಿಯಮಗಳು ಜಾರಿ – ನಿಮ್ಮ ಹಣಕ್ಕೆ ಹೊಸ ಸಂಕಷ್ಟ?

ಈ ವರ್ಷದ ಕೊನೆಯ ತಿಂಗಳು ಅಂದ್ರೆ ಡಿಸೆಂಬರ್ ಶುರುವಾಗ್ತಿದ್ದಂತೆ ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರೋ ಹಲವು ಹೊಸ ಹಣಕಾಸು ನಿಯಮಗಳು ಜಾರಿಗೆ ಬರ್ತಿವೆ ನೋಡಿ.. ಎಸ್ ‘ಕ್ರೆಡಿಟ್ ಕಾರ್ಡ್ ಶುಲ್ಕದಿಂದ ಹಿಡಿದು ಆಧಾರ್ ಅಪ್‌ಡೇಟ್‌ವರೆಗೆ ಏನೆಲ್ಲಾ ಬದಲಾವಣೆ ಆಗ್ತಿದೆ ಈ ಡಿಸೆಂಬರ್ ತಿಂಗಳಲ್ಲಿ ಅಂತ ಈಗ ನೋಡೋಣ.

ಮೊದಲನೆಯದಾಗಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಡಿಸೆಂಬರ್ 1ರಿಂದ ಶಾಕ್ ಎದುರಾಗಲಿದೆ. ಹೌದು ‘ಒಂದು ವಹಿವಾಟಿನಲ್ಲಿ 30 ಸಾವಿರ ರೂಪಾಯಿ ಮೀರಿದ ಸಾರಿಗೆ ಪಾವತಿಗೆ ಹಾಗೂ ತಿಂಗಳಿಗೆ 50 ಸಾವಿರ ರೂಪಾಯಿ ಮೀರಿದ ಇಂಧನ ಖರ್ಚಿನ ಪೂರ್ತಿ ಮೊತ್ತದ ಮೇಲೆ ಶೇಕಡಾ 1ರಷ್ಟು ಹೆಚ್ಚುವರಿ ಶುಲ್ಕ ಬೀಳಲಿದೆ. ಇನ್ನು ಡಿಸೆಂಬರ್ 2ರಿಂದ 4ರವರೆಗೆ ಆರ್‌ಬಿಐ ಹಣಕಾಸು ನೀತಿ ಸಭೆ ನಡೆಯಲಿದ್ದು, ಹಣದುಬ್ಬರ ಹೆಚ್ಚಾಗಿರೋದ್ರಿಂದ ರೆಪೋ ದರ ಮತ್ತೆ ಏರಿಕೆಯಾಗಿ ಸಾಲದ ಬಡ್ಡಿ ದುಬಾರಿಯಾಗೋ ಸಾಧ್ಯತೆ ಇದೆ ಅಂಥ ಹೇಳಲಾಗ್ತಿದೆ..

ಡಿಸೆಂಬರ್ 1ರಿಂದ ಕಮಾಡಿಟಿ ಡೆರಿವೇಟಿವ್ಸ್‌ಗಳಿಗೆ ಸೆಬಿಯ ಹೊಸ ಮಾರ್ಜಿನ್ ನಿಯಮ ಸಹ ಜಾರಿಯಾಗಲಿದ್ದು, ಸರಕುಗಳ ಏರಿಳಿತಕ್ಕೆ ತಕ್ಕಂತೆ ಶೇಕಡಾ 6ರಿಂದ 10ರವರೆಗೆ ಮಾರ್ಜಿನ್ ಇರಲಿದೆ ಅಂತ ಹೇಳಲಾಗ್ತಿದೆ.. ಇನ್ನು ಡಿಸೆಂಬರ್ 3ರಿಂದ ಅನಿವಾಸಿ ಭಾರತೀಯರು ಮತ್ತು ವಿದೇಶಿ ಹೂಡಿಕೆದಾರರು ಭಾರತಕ್ಕೆ ಬರದೆಯೇ ಆನ್‌ಲೈನ್ ಮೂಲಕ ಡಿಜಿಟಲ್ ಕೆವೈಸಿ ಮಾಡಿಸಬಹುದು. ಹಾಗೆಯೇ ಪಿಂಚಣಿದಾರರು ಡಿಸೆಂಬರ್ ಪಿಂಚಣಿ ಪಡೆಯಲು ನವೆಂಬರ್ 30ರ ಒಳಗೆ ಜೀವನ್ ಪ್ರಮಾಣ ಪತ್ರ ಸಲ್ಲಿಸೋದು ಕಡ್ಡಾಯವಾಗಿದೆ. ಇದು ಡಿಸೆಂಬರ್ 1ರ ಹೊಸ ನಿಯಮವಲ್ಲದಿದ್ದರೂ, ಡಿಸೆಂಬರ್ ನಂತರದ ಪಿಂಚಣಿ ವಿತರಣೆಗೆ ಅತ್ಯಗತ್ಯವಾದ ನಿಯಮವಾಗಿದೆ.

ಕೊನೆಯದಾಗಿ ಒಂದು ಗುಡ್ ನ್ಯೂಸ್ ಏನಂದ್ರೆ, ಅಧಿಕೃತ ಆಧಾರ್ ಮೊಬೈಲ್ ಆ್ಯಪ್ ಮೂಲಕ ಇಮೇಲ್ ವಿಳಾಸ ಸೇರಿಸಲು ಅಥವಾ ಅಪ್‌ಡೇಟ್ ಮಾಡಲು ಇದ್ದ 75 ರೂಪಾಯಿ ಶುಲ್ಕಕ್ಕೆ ಡಿಸೆಂಬರ್ 31ರವರೆಗೆ ವಿನಾಯಿತಿ ಸಿಕ್ಕಿದೆ. ಒಟ್ಟಿನಲ್ಲಿ ಡಿಸೆಂಬರ್‌ನ ಈ ಹೊಸ ಬದಲಾವಣೆಗಳ ಬಗ್ಗೆ ಮೊದಲೇ ತಿಳಿದುಕೊಂಡು ನಿಮ್ಮ ಹಣಕಾಸು ವ್ಯವಹಾರ ಪ್ಲಾನ್ ಮಾಡಿಕೊಳ್ಳೋದು ಒಳ್ಳೆಯದು.

About The Author