ಮೋದಿ ಸರ್ಕಾರದ ಮಾತೆಲ್ಲವೂ ಸುಳ್ಳು: ರಾಹುಲ್​ ಗಾಂಧಿ

ಕರೊನಾ ಸಂಕಷ್ಟದಲ್ಲಿರೋ ಭಾರತೀಯ ಜನತೆಗೆ ಮೋದಿ ಸರ್ಕಾರ ನೀಡಿದ ಅಭಯಗಳೆಲ್ಲವೂ ಸುಳ್ಳು ಅಂತಾ ಟ್ವಿಟರ್​ನಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್​ ಗಾಂಧಿ ಆರೋಪಿಸಿದ್ದಾರೆ.

Karnataka TV Contact


21 ದಿನಗಳಲ್ಲಿ ದೇಶದಿಂದ ಕರೊನಾ ಓಡಿಸುತ್ತೇವೆ ಎಂದ್ರು. ಆರೋಗ್ಯ ಸೇತು ಆಪ್​ ಬಳಕೆ ಮಾಡಿದ್ರೆ ನೀವು ಸುರಕ್ಷಿತರಾಗಿ ಇರ್ತೀರಾ ಅಂತಾ ಹೇಳಿದ್ರು. ಆತ್ಮನಿರ್ಭರ್​ ಆಗಿ ಅಂದ್ರು. 20 ಕೋಟಿ ಸ್ಪೆಶಲ್​ ಪ್ಯಾಕೇಜ್​, ಗಡಿಯಲ್ಲಿ ಯಾವುದೇ ಸಮಸ್ಯೆಯೂ ಇಲ್ಲ ಅಂದ್ರು. ಆದ್ರೆ ಮೋದಿ ಸರ್ಕಾರದ ಈ ಎಲ್ಲಾ ಮಾತುಗಳು ಸುಳ್ಳೆಂದು ಸಾಬೀತಾಗಿವೆ. ಆಪತ್ತಿನ ಕಾಲದಲ್ಲಿ ಅವಸರ ಮಾಡಿದ್ದು ಬಿಟ್ರೆ ಮೋದಿ ಸರ್ಕಾರ ಇನ್ನೇನನ್ನೂ ಮಾಡಿಲ್ಲ ಅಂತಾ ಕಿಡಿಕಾರಿದ್ರು.


ಪ್ರಧಾನಿ ಮೋದಿ ಗಡಿಯಲ್ಲಿ ಆಕ್ರಮಣ ಆಗಿಲ್ಲ ಅಂತಾರೆ. ಚೀನಾ ಬ್ಯಾಂಕ್​ನಿಂದ ಭಾರೀ ಮೊತ್ತದ ಸಾಲ ಪಡೀತಾರೆ. ಇತ್ತ ರಕ್ಷಣಾ ಮಂತ್ರಿ ಚೀನಾ ನಮ್ಮ ಮೇಲೆ ಅಟ್ಯಾಕ್​ ಮಾಡಿದೆ ಅಂತಾ ಹೇಳಿಕೆ ಕೊಡ್ತಾರೆ. ಆಮೇಲೆ ರಾಜ್ಯದ ಗೃಹ ಮಂತ್ರಿಗಳು ಯಾವುದೇ ದಾಳಿ ನಡೆದಿಲ್ಲ ಅಂತಾ ಹೇಳ್ತಾರೆ.ಇದನ್ನೆಲ್ಲ ನೋಡ್ತಿದ್ರೆ ಮೋದಿ ಸರ್ಕಾರ ಭಾರತದ ಪರ ಇದ್ಯೋ ಇಲ್ಲ ಚೀನಾದ ಪರ ಇದ್ಯೋ ಅನ್ನೋದೇ ಅರ್ಥ ಆಗಲ್ಲ ಅಂತಾ ಅಸಮಾಧಾನ ಹೊರಹಾಕಿದ್ರು.

ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466

About The Author