Saturday, December 21, 2024

Latest Posts

ಇಬ್ಬರು ಪಕ್ಷೇತರರಿಗೆ ದೋಸ್ತಿ ಸರ್ಕಾರ ಮಣೆ- ಸಂಪುಟ ವಿಸ್ತರಣೆ ಫಿಕ್ಸ್…!

- Advertisement -

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಖಚಿತವಾಗಿದ್ದು ಈ ಬಗ್ಗೆ ಸಿಎಂ ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿದ್ದು, ಇಬ್ಬರು ಪಕ್ಷೇತರರನ್ನು ತಮ್ಮತ್ತ ಸೆಳೆಯಲು ಸಿಎಂ ಸಫಲರಾಗಿದ್ದಾರೆ.

ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳೋ ನಿಟ್ಟಿನಲ್ಲಿ ಪಕ್ಷೇತರ ಶಾಸಕರನ್ನು ಸೆಳೆಯೋದು ಮೈತ್ರಿ ನಾಯಕರಿಗೆ ಬಹುಮುಖ್ಯವಾದ ಕೆಲಸ. ಈ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ್ರೆ ಮಾತ್ರ ಈ ಇಬ್ಬರೂ ಪಕ್ಷೇತರ ಶಾಸಕರ ಕ್ಯಾಬಿನೆಟ್  ಸೇರ್ಪಡೆ ಅವಕಾಶವಿರುತ್ತೆ ಅಂತ ದೋಸ್ತಿ ನಾಯಕರು ಲೆಕ್ಕಾಚಾರ ಹಾಕಿದ್ರು. ಹೀಗಾಗಿ ಇವತ್ತು ಸಿಎಂ ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಗೆ ಸಮಯ ಕೇಳಿದ್ರು. ಆದ್ರೆ ಈಗಾಗಲೇ ಪಕ್ಷದ ಮುಖಂಡರಾದ ರಾಮಲಿಂಗಾ ರೆಡ್ಡಿ ಹಾಗೂ ಬಿ.ಸಿ ಪಾಟೀಲ್ ಅಸಮಾಧಾನ ಹೊರಹಾಕಿದ್ದ ಹಿನ್ನೆಲೆಯಲ್ಲಿ ಅವರನ್ನೂ ಓಲೈಕೆ ಮಾಡೋದಕ್ಕೆ ಹೊರಟಿದೆ. ಇದರಿಂದಾಗಿ ಬಿ.ಸಿ ಪಾಟೀಲ್ ಹಾಗೂ ಆರ್.ಶಂಕರ್ ಗೆ ಸಚಿವ ಸ್ಥಾನ ಖಚಿತವಾಗಿದ್ದು, ರಾಮಲಿಂಗಾರೆಡ್ಡಿ ಅಥವಾ ನಾಗೇಂದ್ರ ಈ ಇಬ್ಬರಲ್ಲಿ ಒಬ್ಬರಿಗೆ ಮಂತ್ರಿಗಿರಿ ಲಭಿಸಲಿದೆ.

ಇನ್ನು ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್ ಗೆ ಪ್ರಮುಖ ನಿಗಮ ಮಂಡಳಿ ಸ್ಥಾನ ನೀಡಿ ಅವರನ್ನು ಹಿಡಿದಿಟ್ಟುಕೊಳ್ಳೋ ಪ್ರಯತ್ನಕ್ಕೆ ದೋಸ್ತಿ ಸರ್ಕಾರ ಮುಂದಾಗಿದೆ.  ಅಸಮಾಧಾನಿತರಿಗೆ ಅವಕಾಶ ಕಲ್ಪಿಸೋದಕ್ಕೆ ಕಾಂಗ್ರೆಸ್ ನಿಂದ ಒಬ್ಬರು ಮತ್ತು ಜೆಡಿಎಸ್ ನಿಂದ ಒಬ್ಬರು ಸಚಿವರು ಪದತ್ಯಾಗಕ್ಕೆ ಸಿದ್ಧವಾಗಿದ್ದಾರೆ ಎನ್ನಲಾಗಿದೆ. ಇನ್ನು ಜೂ.12ರ ಬುಧವಾರದಂದು ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದ್ದು, ಅಂದು ಬೆಳಗ್ಗೆ 11.30ಕ್ಕೆ ನೂತನ ಸಚಿವರ ಪದಗ್ರಹಣವಾಗಲಿದೆ.

ಡಿ ಬಾಸ್ ಮನೆ ಮುಂದೆ ಏನಾಗಿದೆ ಗೊತ್ತಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss