ಭಾರತದಲ್ಲೇ ಫೇಮಸ್ ಮಹಾಲಕ್ಷ್ಮೀ ದೇವಸ್ಥಾನ ಯಾವುದು ಎಂದು ಕೇಳಿದ್ರೆ ಅದು ಕೋಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನ ಅಂತಾನೇ ಎಲ್ಲರೂ ಹೇಳೋದು. ಅದೇ ಮಹಾಲಕ್ಷ್ಮೀ ದೇವಸ್ಥಾನದ ಬಗ್ಗೆ ನಾವಿವತ್ತು ಕೆಲ ಮಾಹಿತಿಯನ್ನ ನೀಡಲಿದ್ದೇವೆ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ಭಾರತದ ಪುರಾತನ ದೇವಾಲಯಗಳಲ್ಲಿ ಮಹಾಲಕ್ಷ್ಮೀ ದೇವಸ್ಥಾನವೂ ಒಂದಾಗಿದೆ. ಮಹಾರಾಷ್ಟ್ರದ ಕೋಲ್ಹಾಪುರ ಎಂಬಲ್ಲಿ ಈ ಮಹಾಲಕ್ಷ್ಮೀ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ರಾಜಕೀಯ ವ್ಯಕ್ತಿಗಳು, ನಟ ನಟಿಯರು ಸೇರಿ ದೇಶ ವಿದೇಶಗಳಿಂದ ಹಲವಾರು ಭಕ್ತರು ಲಕ್ಷ್ಮೀದೇವಿಯ ದರ್ಶನ ಪಡೆಯಲು ಕೋಲ್ಹಾಪುರಕ್ಕೆ ಬರುತ್ತಾರೆ.
ಇನ್ನು ಪುರಾಣದ ಕಥೆಯ ಪ್ರಕಾರ, ಲೋಕಕಲ್ಯಾಣಕ್ಕಾಗಿ ಗಂಗಾ ನದಿ ತೀರದಲ್ಲಿ ಭೃಗು ಮಹರ್ಷಿಗಳು ಯಾಗ-ಯಜ್ಞ ಮಾಡುತ್ತಾರೆ. ಈ ವೇಳೆ ಲೋಕಸಂಚಾರಿಯಾದ ನಾರದ ಮುನಿಗಳು ಯಜ್ಞ ಫಲವನ್ನ ಯಾರಿಗೆ ನೀಡುತ್ತೀರೆಂದು ಕೇಳಿದಾಗ. ಯಾರು ಸಮರ್ಥರೆಂದು ಪರಿಕ್ಷಿಸಲು ಭ್ರಗು ಮಹರ್ಷಿಗಳು ಅಣಿಯಾಗುತ್ತಾರೆ.
ಬ್ರಹ್ಮನ ಬಳಿ ಭೃಗು ಮಹರ್ಷಿಗಳು ಹೋದಾಗ, ಬ್ರಹ್ಮ ಮತ್ತು ಸರಸ್ವತಿ ವೇದಗಳ ಬಗ್ಗೆ ಚರ್ಚಿಸುತ್ತಿರುತ್ತಾರೆ. ಅವರಿಗೆ ಭೃಗು ಮಹರ್ಷಿ ಬಂದಿದ್ದು ತಿಳಿಯುವುದಿಲ್ಲ. ಈ ಕಾರಣಕ್ಕೆ ಕೋಪಗೊಂಡ ಭೃಗು ಮಹರ್ಷಿ, ಭೂ ಲೋಕದಲ್ಲಿ ನಿಮಗೆ ದೇವಸ್ಥಾನಗಳೇ ಇಲ್ಲದಿರಲಿ ಎಂದು ಶಾಪ ಹಾಕುತ್ತಾರೆ.
ಇನ್ನು ಶಿವಪಾರ್ವತಿಯರ ಬಳಿ ಭೃಗು ಮಹರ್ಷಿ ಬಂದಾಗ, ಶಿವ ಪಾರ್ವತಿ ಏಕಾಂತದಲ್ಲಿದ್ದುದರಿಂದ ಭೃಗು ಮಹರ್ಷಿಯ ಬಳಿ ಅವರು ಗಮನ ಕೊಡುವುದಿಲ್ಲ. ಈ ವೇಳೆಯೂ ಕೋಪಗೊಂಡ ಭೃಗು ಮಹರ್ಷಿ, ಭೂಲೋಕದಲ್ಲಿ ನಿನ್ನನ್ನು ಯಾರೂ ವಿಗ್ರಹ ರೂಪದಲ್ಲಿ ಪೂಜಿಸದೇ, ಲಿಂಗ ರೂಪದಲ್ಲಿ ಪೂಜಿಸಲಿ ಎಂದು ಶಾಪ ನೀಡುತ್ತಾರೆ.
ತದನಂತರ ಮಹಾವಿಷ್ಣು ಮತ್ತು ಲಕ್ಷ್ಮಿಯ ಬಳಿ ಭೃಗು ಮಹರ್ಷಿಗಳು ಬರುತ್ತಾರೆ. ಮಹಾವಿಷ್ಣವು ಶೇಷನ ಮೇಲೆ ನಿದ್ರಿಸುತ್ತಿರುವುದನ್ನ ಕಂಡು ಕೋಪಗೊಂಡ ಭೃಗುವು, ವಕ್ಷಸ್ಥಳಕ್ಕೆ ಒದೆಯುತ್ತಾರೆ. ಆದ್ರೆ ಇದಕ್ಕೆ ಕೋಪಗೊಳ್ಳದ ವಿಷ್ಣುವು, ನಿಮ್ಮ ಕಾಲಿಗೆ ಪೆಟ್ಟಾಗಲಿಲ್ಲ ಅಲ್ಲವೇ ಎಂದು ನಮೃವಾಗಿ ಕೇಳುತ್ತಾನೆ. ಈ ವೇಳೆ ಸಮಾಧಾನಗೊಂಡ ಭೃಗು ಮಹರ್ಷಿ, ಯಜ್ಞ ಫಲವನ್ನ ಶ್ರೀವಿಷ್ಣುವಿಗೆ ನೀಡುತ್ತಾನೆ.
ಆದರೆ ವಿಷ್ಣುವಿನ ವಕ್ಷಸ್ಥಳದಲ್ಲಿ ವಾಸವಿದ್ದ ಲಕ್ಷ್ಮೀಗೆ ಇದರಿಂದ ಅವಮಾನವಾಗುತ್ತದೆ. ಭೃಗು ಮಹರ್ಷಿ ಒದ್ದರೂ ಕೂಡ ಶ್ರೀವಿಷ್ಣು ಕೋಪಗೊಳ್ಳದ ಕಾರಣ ಅವಮಾನಿತಳಾದ ಲಕ್ಷ್ಮೀ, ವೈಕುಂಠ ತೊರೆದು ಕೊಲ್ಹಾಪುರಕ್ಕೆ ಬಂದು ನೆಲೆಸಿದಳು ಎಂದು ಹೇಳಲಾಗುತ್ತದೆ. ಇನ್ನೊಂದು ಕಥೆಯ ಪ್ರಕಾರ ಕೋಲ್ಹಾಸುರನನ್ನು ಸಂಹರಿಸಿದ ಲಕ್ಷ್ಮೀ ಕೊಲ್ಹಾಪುರ ಮಹಾಲಕ್ಷ್ಮೀಯಾಗಿ ನೆಲೆನಿಂತಳು ಎಂದು ಹೇಳಲಾಗುತ್ತದೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.




