ನಾವು ತಂದೆ, ತಾಯಿಯನ್ನ ಹೇಗೆ ದೇವರ ಸಮಾನವಾಗಿ ನೋಡುತ್ತೇವೋ ಅಂತೆಯೇ ಗುರುವನ್ನ ಕೂಡ ದೇವರ ಸಮಾನವಾಗಿ ಕಾಣಬೇಕು ಎಂದು ಹಿರಿಯರು ಹೇಳಿದ್ದಾರೆ. ಗುರುಗಳಿಗೇ ಗುರುವಾಗಿದ್ದ ದಕ್ಷಿಣಾ ಮೂರ್ತಿ, ಗುರು ರಾಯರು, ಸಾಯಿ ಬಾಬಾ, ದತ್ತಾತ್ರೇಯ ಇತ್ಯಾದಿ ದೇವ ಮಾನವರು ಗುರುವಿನ ರೂಪದಲ್ಲಿ ಪೂಜಿಸಲ್ಪಡುವರು. ಹೀಗೆ ಪೂಜಿಸಲ್ಪಡುವ ಗುರುಗಳ ಪಟ್ಟಿಗೆ ಸೇರುವ ಇನ್ನೋರ್ವ ಗುರುವೆಂದರೆ, ಶ್ರೀ ಶ್ರೀಧರ ಸ್ವಾಮಿಗಳು. ಅದಕ್ಕಾಗಿ ನಾವಿಂದು ವರದಹಳ್ಳಿಯ ಶ್ರೀ ಶ್ರೀಧರಾಶ್ರಮದ ಬಗ್ಗೆ ತಿಳಿಯೋಣ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಹಳ್ಳಿ ಶ್ರೀಧರಾಶ್ರಮವಿದೆ. ಇಲ್ಲಿ ದತ್ತಾತ್ರೇಯನ ಸ್ವರೂಪವೆಂದೇ ಹೇಳಲಾಗುವ ಶ್ರೀ ಶ್ರೀಧರಾನಂದ ಸ್ವಾಮಿಗಳು ಪೂಜಿಸಲ್ಪಡುತ್ತಾರೆ. ಶ್ರೀಧರಾನಂದ ಸ್ವಾಮಿಗಳು ದತ್ತ ಜಯಂತಿಯಂದೇ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ತಂದೆ ತಾಯಿ ಅಕ್ಕನನ್ನು ಕಳೆದುಕೊಂಡ ಶ್ರೀಗಳು, ಆಧ್ಯಾತ್ಮದ ಕಡೆ ವಾಲಿದರು. ಶ್ರೀ ಸಮರ್ಥ ರಾಮದಾಸರಿಂದ ದೀಕ್ಷೆ ಕೂಡ ಪಡೆದರು.
ದೇಶವೆಲ್ಲ ತಿರುಗಿ ಧರ್ಮಬೋಧನೆ, ಉಪಾಸನೆ ಮಾಡಿಕೊಂಡಿದ್ದರು. ಇವರು ಸನ್ಯಾಸತ್ವ ಸ್ವೀಕರಿಸಿದರೂ ಕೂಡ, ಮಠ ಮಾನ್ಯಗಳನ್ನ ಕಟ್ಟಿರಲಿಲ್ಲ, ಮಠಾಧೀಶರೆನ್ನಿಸಿಕೊಂಡಿರಲಿಲ್ಲ. ಹೀಗೆ ದೇಶವೆಲ್ಲ ಸುತ್ತಿ ಧರ್ಮ ಬೋಧನೆ ಮಾಡುತ್ತ ಶಿವಮೊಗ್ಗದ ವರದಹಳ್ಳಿ ಶ್ರೀಧರಾಶ್ರಮಕ್ಕೆ ಬರುತ್ತಾರೆ. ಇಲ್ಲಿನ ವಾತಾವರಣಕ್ಕೆ ಮನಸೋತ ಶ್ರೀಗಳು ಇಲ್ಲಿಯೇ ನೆಲೆ ನಿಲ್ಲಲು ನಿರ್ಧರಿಸುತ್ತಾರೆ.
ಇದೇ ಜಾಗದಲ್ಲಿ ಒಂದು ಆಶ್ರಮ ಸ್ಥಾಪಿಸಿ, ಧರ್ಮ ಬೋಧನೆ ಮಾಡುತ್ತ, 1973ರರಲ್ಲಿ ಐಕ್ಯರಾದರು. ಶ್ರೀಧರಾಶ್ರಮದಲ್ಲಿ ಅವರ ಸಮಾಧಿಯನ್ನ ನಾವು ಕಾಣಬಹುದು. ಕರ್ನಾಟಕ ಮಾತ್ರವಲ್ಲದೇ, ಮಹಾರಾಷ್ಟ್ರದಿಂದ ಕೂಡ ಭಕ್ತರು ಶ್ರೀಧರಾಶ್ರಮಕ್ಕೆ ಭೇಟಿ ನೀಡುತ್ತಾರೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.




