Monday, December 23, 2024

Latest Posts

ಸ್ಯಾಂಡಲ್‌ವುಡ್ ಹಿರಿಯ ಸಂಗೀತ ನಿರ್ದೇಶಕ ರಾಜನ್ ನಿಧನಕ್ಕೆ ಸಂತಾಪ..

- Advertisement -

ಸ್ಯಾಂಡಲ್‌ವುಡ್‌ ಹೆಸರಾಂತ ಹಿರಿಯ ಸಂಗೀತ ನಿರ್ದೇಶಕ ರಾಜನ್ (89) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕನ್ನಡ ತೆಲುಗು, ತಮಿಳು ಭಾಷೆಗಳ ನೂರಾರು ಹಾಡಿಗೆ ರಾಜನ್ ನಿರ್ದೇಶನ ಮಾಡಿದ್ರು. ಎರಡು ಕನಸು, ಶ್ರೀನಿವಾಸ ಕಲ್ಯಾಣ, ಬಯಲು ದಾರಿ, ನಾ ನಿನ್ನ ಮರೆಯಲಾರೆ, ಹೊಂಬಿಸಿಲು, ಗಾಳಿ ಮಾತು, ಚಲಿಸುವ ಮೋಡಗಳು ಸೇರಿ 200ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಿಗೆ ರಾಜನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ 375ಕ್ಕೂ ಅಧಿಕ ಸಿನಿಮಾಗಳಿಗೆ ರಾಜನ್ ಮತ್ತು ನಾಗೇಂದ್ರ ಜೊತೆಯಾಗಿ ಸಂಗೀತ ನೀಡಿದ್ದರು. ಇನ್ನು ರಾಜನ್ ನಿಧನಕ್ಕೆ ಸ್ಯಾಂಡಲ್‌ವುಡ್ ತಾರೆಯರು ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.

ಹೆಸರಾಂತ ಹಿರಿಯ ಸಂಗೀತ ನಿರ್ದೇಶಕ ಶ್ರೀ ರಾಜನ್ ಅವರು ನಿಧನರಾದ ಸುದ್ದಿ ತೀವ್ರ ಶೋಕವನ್ನುಂಟು ಮಾಡಿದೆ. ತಮ್ಮ ಸಹೋದರ ನಾಗೇಂದ್ರಪ್ಪ ಅವರೊಂದಿಗೆ ‘ರಾಜನ್‌-ನಾಗೇಂದ್ರ’ ಹೆಸರಿನಲ್ಲಿ ಜಂಟಿಯಾಗಿ ಅನೇಕ ಜನಪ್ರಿಯ, ಯಶಸ್ವಿ ಕನ್ನಡ ಚಿತ್ರಗಳಿಗೆ ಸಂಗೀತ ನೀಡಿದ್ದ ರಾಜನ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಅನಾಥವಾಗಿದೆ- ಸಿಎಂ ಯಡಿಯೂರಪ್ಪ ಟ್ವೀಟ್..

ಖ್ಯಾತ ಸಂಗೀತ ನಿರ್ದೇಶಕ ರಾಜನ್ ಅವರ ನಿಧನದ ಸುದ್ದಿ ಮನಸ್ಸಿಗೆ ತೀವ್ರ ನೋವುಂಟುಮಾಡಿದೆ. ಕನ್ನಡದಲ್ಲಿ 175 ಕ್ಕೂ‌ಹೆಚ್ಚು ಚಿತ್ರಗಳಿಗೆ ಸಂಗೀತ ‌ನಿರ್ದೇಶನ ಮಾಡಿದ್ದ ಖ್ಯಾತಿ ರಾಜನ್-ನಾಗೇಂದ್ರ ‌ಜೋಡಿಯದ್ದಾಗಿತ್ತು. ಗಂಧದಗುಡಿ, ಬಯಲುದಾರಿ, ಎರಡುಕನಸು, ಹೊಂಬಿಸಿಲು, ಆಟೋರಾಜ ಸೇರಿ ಹಲವಾರು ಚಿತ್ರಗಳ ಸಂಗೀತ ನಿರ್ದೇಶನ ಮಾಡಿದ್ದ ಅವರು ಕನ್ನಡ ಚಿತ್ರರಂಗದ ಸಂಗೀತದ ಘನತೆಯನ್ನು ಹೆಚ್ಚಿಸಿದ್ದವರು. ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.- ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್

- Advertisement -

Latest Posts

Don't Miss