ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಮತ್ತೊಂದು ಪ್ಯಾನ್ ಇಂಡಿಯನ್ ಸಿನಿಮಾ ಮಾಡ್ತಾರೆ, ಅದರಲ್ಲಿ ತೆಲುಗು ಹೀರೋ ಇರ್ತಾರೆ ಅಂತಾ ಮೊದಲೇ ಸುದ್ದಿ ಹರಿದಾಡಿತ್ತು. ಇಂದು ಅದು ನಿಜ ಅಂತಾ ಸಾಬೀತಾಗಿದೆ. ಬಾಹುಬಲಿ ಖ್ಯಾತಿಯ ಪ್ರಭಾಸ್ ಪ್ರಶಾಂತ್ ನೀಲ್‌ರ ಮುಂದಿನ ಸಿನಿಮಾದಲ್ಲಿ ನಾಯಕನಟನಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾಗೆ ಸಲಾರ್ ಎಂದು ನಾಮಕರಣ ಮಾಡಲಾಗಿದ್ದು, ಪೋಸ್ಟರ್ ರಿಲೀಸ್ ಮಾಡಲಾಗಿದೆ.


ಇಂದು ಮಧ್ಯಾಹ್ನ 2ಗಂಟೆ ಬಳಿಕ ಸಲಾರ್ ಸಿನಿಮಾ ಪೋಸ್ಟರ್ ಬಿಡುಗಡೆಯಾಗಿದ್ದು, ಇದರಲ್ಲಿ ನಾಯಕನಟ ಪ್ರಭಾಸ್ ಎಕೆ 47 ಗನ್ ಹಿಡಿದು ಮಾಸ್ ಲುಕ್‌ನಲ್ಲಿ ಪೋಸ್ ಕೊಟ್ಟಿದ್ದಾರೆ. ದಿ ಮೋಸ್ಟ್ ವೈಲೆಂಟ್ ಮ್ಯಾನ್, ಕಾಲ್ಡ್ ಒನ್ ಮೆನ್ , ವೈಲೆಂಟ್ ಮ್ಯಾನ್ ಎಂದು ಈ ಪೋಸ್ಟರ್‌ಗೆ ಸೈಡ್ ಲೈನ್ ನೀಡಲಾಗಿದೆ.
ಈ ಬಗ್ಗೆ ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದು, ದಿ ಮೋಸ್ಟ್ ವೈಲೆಂಟ್ ಮ್ಯಾನ್, ಕಾಲ್ಡ್ ಒನ್ ಮೆನ್ , ವೈಲೆಂಟ್ ಮ್ಯಾನ್, ಸಿನಿಮಾ ಮೇಲಿನ ಪ್ರೀತಿಗಾಗಿ ಭಾಷೆಯ ಬೇಲಿ ಬ್ರೇಕ್ ಮಾಡಿದ್ದೇನೆ. ಮುಂದಿನ ಸಿನಿಮಾ ಸಲಾರ್ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ. ಡಾರ್ಲಿಂಗ್ ಪ್ರಭಾಸ್‌ರನ್ನ ಸ್ವಾಗತಿಸಿ ಎಂದು ಬರೆದುಕೊಂಡಿದ್ದಾರೆ.
ಉಗ್ರಂ ಚಿತ್ರ ಮಾಡಿ ಗೆದ್ದ ಪ್ರಶಾಂತ್ ನೀಲ್, ಅಲ್ಲಿಂದ ಹಿಂದಿರುಗಿ ನೋಡಲೇ ಇಲ್ಲ. ರಾಕಿಂಗ್ ಸ್ಟಾರ್ ಯಶ್ ಜೊತೆ ಸೇರಿ ಪ್ಯಾನ್ ಇಂಡಿಯನ್ ಸಿನಿಮಾ ಮಾಡಿದರು. ಕೆಜಿಎಫ್ ಆಲ್‌ರೆಡಿ ಕಮಾಲ್ ಮಾಡಿದ್ದು, ಎಲ್ಲರೂ ಕೆಜಿಎಫ್ 2 ಗಾಗಿ ಕಾಯ್ತಿದ್ದಾರೆ.