Saturday, June 21, 2025

Latest Posts

ಸೂಪರ್‌ಸ್ಟಾರ್ ರಜನಿಕಾಂತ್ ಎಷ್ಟು ಆಸ್ತಿಯ ಒಡೆಯ ಗೊತ್ತಾ..?

- Advertisement -

ಸೂಪರ್‌ಸ್ಟಾರ್ ರಜನಿಕಾಂತ್. ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಾದರೂ, ಚಿತ್ರರಂಗದಲ್ಲಿ ಹೆಸರು ಸಾಧಿಸಿದ್ದು ಮಾತ್ರ ತಮಿಳಿನಲ್ಲಿ. ತಮಿಳಿಗರ ತೈಲವಾ ಎನ್ನಿಸಿಕೊಂಡಿರುವ ರಜನಿಕಾಂತ್, ಬಾಲಿವುಡ್, ಹಾಲಿವುಡ್ ರೇಂಜ್‌ಗೆ ಫೇಮಸ್ ಅಂದ್ರೆ ತಪ್ಪಾಗಲ್ಲ. ಇವರ ಯಾವುದಾದರೂ ಸಿನಿಮಾ ರಿಲೀಸ್ ಆಗತ್ತೆ ಅಂತಾದ್ರೆ, ಅಂದು ರಜನಿ ಫ್ಯಾನ್ಸ್‌ಗೆ ಹಬ್ಬವೋ ಹಬ್ಬ.

1950 ಡಿಸೆಂಬರ್ 12ರಂದು ಜನಿಸಿದ ರಜನಿಕಾಂತ್, ಮೊದಲು ಬೆಂಗಳೂರಿನ ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್ ಆಗಿದ್ದರು. ಆಗಿನ್ನೂ ಅವರು ಶಿವಾಜಿ ರಾವ್ ಗಾಯಕ್ವಾಡ್ ಆಗಿದ್ದರು. ನಂತರ ತಮಿಳು ಚಿತ್ರದಲ್ಲಿ ತಮ್ಮ ಲಕ್ ಕಂಡುಕೊಳ್ಳಲು ಹೋಗಿದ್ದ ರಜಿನಿಗೆ, ಬರೀ ಲಕ್ ಅಲ್ಲ ಜಾಕ್‌ಪಾಟೇ ಹೊಡೆಯಿತು. ತಮಿಳಿನ ಜೊತೆಯಲ್ಲಿ, ತೆಲುಗು, ಹಿಂದಿ, ಕನ್ನಡ ಸಿನಿಮಾಗಳಲ್ಲೂ ಕೂಡ ರಜಿನಿ ಅಭಿನಯಿಸಲು ಶುರು ಮಾಡಿದರು. ನೋಡು ನೋಡುತ್ತಲೇ ಸೂಪರ್ ಸ್ಟಾರ್ ಆಗಿ ಬೆಳೆದರು. ತಮಿಳಿಗರ ತಲೈವಾ ಆದರು. ಇಂಥ ರಜನಿಕಾಂತ್ ಅವರ ಆಸ್ತಿಯ ಮೌಲ್ಯ ಎಷ್ಟು ಅಂತಾ ನಿಮಗೆ ಗೊತ್ತಾ..?

ರಜನಿಕಾಂತ್ ಅವರ ಒಟ್ಟು ಆಸ್ತಿ ಸುಮಾರು 50 ಮಿಲಿಯನ್ ಡಾಲರ್. ಪ್ರತೀ ಚಿತ್ರಕ್ಕೂ 50 ಕೋಟಿ ಸಂಭಾವನೆ ಪಡೆಯುವ ರಜನಿ, ಚೆನ್ನೈ ಮತ್ತು ಪುಣೆಯಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಅದ್ಭುತವಾದ ಮನೆ ಕಟ್ಟಿಸಿದ್ದಾರೆ. ಮರ್ಸಿಡೀಸ್ ಜಿ ವ್ಯಾಗನ್, ರೋಲ್ಸ್ ರಾಯ್ಸ್ ಫ್ಯಾಂಟಮ್, ಲಿಮೋಸಿನ್, ರೋಲ್ಸ್ ರಾಯ್ಸ್ ಫೋಸ್ಟ್ ಕಾರ್ ಹೊಂದಿದ್ದಾರೆ. ಇದರ ಒಟ್ಟು ಬೆಲೆ 45 ಕೋಟಿ. ಇನ್ನು ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ರಜನಿ ಮುಂದಾಗಿದ್ದಾರೆ.

- Advertisement -

Latest Posts

Don't Miss