- Advertisement -
ಇದೇ ಡಿಸೆಂಬರ್ 16ರಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಜನ್ಮದಿನವಿದ್ದು, ತಾನು ಹುಟ್ಟು ಹಬ್ಬವನ್ನ ಆಚರಿಸುತ್ತಿಲ್ಲ. ಅಂದು ತಾನು ಬೆಂಗಳೂರಿನಲ್ಲಿಯೂ ಇರುವುದಿಲ್ಲವೆಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಡಿ.16 ನನ್ನ ಜನ್ಮದಿನ. ಕೊರೋನಾ ಸಂಕಷ್ಟವು ಜನರನ್ನು ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಜನ್ಮದಿನ ಆಚರಿಸದಿರಲು ನಿರ್ಧರಿಸಿದ್ದೇನೆ.
ಆ ದಿನ ಬೆಂಗಳೂರಿನಲ್ಲಿ ನಾನು ಲಭ್ಯವಿರುವುದಿಲ್ಲ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ನೀವಿರುವಲ್ಲಿಂದಲೆ ನನ್ನನ್ನು ಹಾರೈಸಿ. ನಿಮ್ಮ ಪ್ರೀತಿ ಅಭಿಮಾನ ದೊಡ್ಡದು.
ಪ್ರತಿ ಜನ್ಮದಿನಗಳು ನಮ್ಮ ಇರುವಿಕೆಯನ್ನು ನೆನಪಿಸುತ್ತವೆ ನಿಜ, ಆದರೆ ಬದುಕಿದ್ದಷ್ಟು ದಿನ ಕಷ್ಟದಲ್ಲಿರುವ ಜನರ ಒಳಿತಿಗೆ ನಿಸ್ವಾರ್ಥವಾಗಿ, ಕಾರುಣ್ಯಭರಿತವಾಗಿ ದುಡಿದಾಗ ನಮ್ಮ ಹುಟ್ಟು ಸಾರ್ಥಕವಾಗುತ್ತದೆ ಎಂಬುದು ನನ್ನ ನಂಬಿಕೆ ಮತ್ತು ನಡೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
- Advertisement -