ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪ್ರಮುಖ ಮಾನ್ಯತೆ ಇದೆ. ಯಾವುದೇ ಪೂಜೆಯಲ್ಲಿ ತುಳಸಿ ಪಾತ್ರ ಮಹತ್ವದ್ದಾಗಿದೆ. ತುಳಸಿಯ ಹಬ್ಬವನ್ನೂ ಮಾಡ್ತಾರೆ. ಆದ್ರೆ ಗಣಪನ ಪೂಜೆಯಲ್ಲಿ ಮಾತ್ರ ತುಳಸಿಯನ್ನ ಬಳಸಲಾಗುವುದಿಲ್ಲ. ಹಾಗಾದ್ರೆ ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ನಾವು ಈ ಮೊದಲು ವೃಂದಾ ಅನ್ನೋ ಹೆಣ್ಣು ಮಗಳೇ ತುಳಸಿ ಅನ್ನೋದನ್ನ ಹೇಳಿದ್ದೇವೆ. ಇನ್ನು ತುಳಸಿಯನ್ನ ಗಣಪನ ಪೂಜೆಯಲ್ಲಿ ಬಳಸದಿರಲು ಕಾರಣವೇನು ಅಂತಾ ನೋಡುವುದಾದ್ರೆ, ಒಮ್ಮೆ ವೃಂದಾ ವಿಷ್ಣುಪೂಜೆಗಾಗಿ ನದಿಯ ಬಳಿ ಹೊರಟಿದ್ದಳು. ಆಗ ಅಲ್ಲಿ ಗಣಪತಿಯೂ ಬಂದಿದ್ದು, ಗಣಪನನ್ನು ನೋಡಿ ಪ್ರಸನ್ನಳಾದ ವೃಂದಾ, ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಳು.
ಆದ್ರೆ ಗಣಪ ವಿನಮ್ರವಾಗಿ ವೃಂದಾಳ ಮಾತನ್ನ ನಿರಾಕರಿಸಿ, ನಾನು ಬ್ರಹ್ಮಚಾರಿಯಾಗಿ ಉಳಿಯಬೇಕೆಂದಿದ್ದೇನೆ. ದೇವರ ಪೂಜೆ ಮಾಡುತ್ತ, ತಂದೆ ತಾಯಿಯ ಜೊತೆ ಇರಲು ಇಚ್ಛಿಸಿದ್ದೇನೆ. ಹಾಗಾಗಿ ಅವಿವಾಹಿತನಾಗೇ ಇರಲು ಬಯಸಿದ್ದೇನೆ ಎನ್ನುತ್ತಾನೆ.
ಈ ಮಾತನ್ನು ಕೇಳಿದ ವೃಂದಾಳಿಗೆ ಸಿಟ್ಟು ಬರುತ್ತದೆ. ನನ್ನಂಥ ಚೆಲುವೆಯನ್ನು ನಿರಾಕರಿಸಿದ್ದಕ್ಕೆ, ನೀನು ಒಂದಲ್ಲ ಒಂದು ದಿನ ವಿವಾಹವಾಗುವ ಪರಿಸ್ಥಿತಿ ಬರಲಿ. ನಿನ್ನ ಆಸೆ ಈಡೇರದಿರಲಿ ಎಂದು ಶಾಪ ಹಾಕುತ್ತಾಳೆ. ಇದಕ್ಕೆ ಸಿಟ್ಟಾದ ಗಣಪ, ವಿನಾಕಾರಣ ಒಬ್ಬರಿಗೆ ಶಾಪ ಹಾಕುವ ತಪ್ಪು ನೀನು ಮಾಡಿರುವೆ. ನಿನ್ನ ವಿವಾಹ ರಾಕ್ಷಸನ ಜೊತೆಯಾಗಲಿ. ಆ ರಾಕ್ಷಸ ಮರಣ ಹೊಂದಿ, ನೀನು ಕೂಡ ಸುಟ್ಟು ಬೂದಿಯಾಗಿ, ಗಿಡದ ರೂಪ ತಾಳಲಿ ಎಂದು ಶಾಪ ಹಾಕುತ್ತಾನೆ.
ನಂತರ ವೃಂದಾಳಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಕ್ಷಮೆ ಕೇಳುತ್ತಾಳೆ. ಶಾಪ ಹಿಂಪಡೆಯಲು ಹೇಳುತ್ತಾಳೆ. ಅದಕ್ಕೆ ಗಣಪ ಶಾಪವಂತೂ ಹಿಂಪಡೆಯಲಾಗುವುದಿಲ್ಲ, ಆದ್ರೆ ಇದಕ್ಕೆ ಪರಿಹಾರವಾಗಿ, ನನ್ನ ಪೂಜೆಯಲ್ಲಿ ಯಾರೂ ತುಳಸಿ ಬಳಸದಂತಾಗಲಿ. ಇದರಿಂದಲೇ ನಿನಗೆ ಮುಕ್ತಿ ಸಿಗಲಿ ಎಂದು ಹೇಳುತ್ತಾನೆ.
ಹೀಗಾಗಿ ವೃಂದಾ ಜಲಂಧರನನ್ನು ವರಿಸುತ್ತಾಳೆ. ಆ ರಾಕ್ಷಸನನ್ನು ಶಿವ ಕೊಲ್ಲುತ್ತಾನೆ. ಮತ್ತು ವಿಷ್ಣು ತನ್ನ ಪಾತಿವೃತ್ಯತೆ ಹಾಳು ಮಾಡಿದ್ದಕ್ಕೆ, ವೃಂದಾ ಸುಟ್ಟು ಬೂದಿಯಾಗಿ, ಗಿಡವಾಗುತ್ತಾಳೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754