ಸ್ಯಾಂಡಲ್‌ವುಡ್‌ನಿಂದ ಜರ್ನಿ ಶುರು ಮಾಡಿ, ಟಾಲಿವುಡ್, ತಮಿಳು ಸಿನಿರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ರಶ್ಮಿಕಾ ಮಂದಣ್ಣ, ಇದೀಗ ಬಾಲಿವುಡ್‌ಗೆ ಎಂಟ್ರಿ ಕೊಡೋಕ್ಕೆ ರೆಡಿಯಾಗಿದ್ದಾರೆ.

ಎರಡು ಬಾರಿ ಬಾಲಿವುಡ್ ಸಿನಿಮಾಗೆ ಸೆಲೆಕ್ಟ್ ಆಗಿ ಮತ್ತೆ ರಿಜೆಕ್ಟ್ ಆಗಿದ್ದರು ಎಂದು ರಶ್ಮಿಕಾ ಬಗ್ಗೆ ಕೆಲ ಸುದ್ದಿಗಳು ಹರಿದಾಡತೊಡಗಿತ್ತು. ಇದೀಗ ಮತ್ತೆ ರಶ್ಮಿಕಾ ಬಾಲಿವುಡ್‌ಗೆ ಎಂಟ್ರಿ ಕೊಡುವ ಸಮಯ ಮತ್ತೆ ಒದಗಿ ಬಂದಿದೆ. ಆದ್ರೆ ರಶ್ಮಿಕಾ ಯಾವುದೇ ಹಿಂದಿ ಸಿನಿಮಾದಲ್ಲಿ ನಟಿಸುತ್ತಿಲ್ಲ. ಬದಲಾಗಿ ಆಲ್ಬಮ್ ಸಾಂಗ್‌ನಲ್ಲಿ ಸ್ಟೆಪ್ ಹಾಕಲಿದ್ದಾರೆ.

ಖ್ಯಾತ ಬಾಲಿವುಡ್ ರ್ಯಾಪರ್ ಬಾದ್‌ಶಾಹ್, ರಶ್ಮಕಾಗೆ ಈ ಆಫರ್ ನೀಡಿದ್ದು, ತಮ್ಮ ಆಲ್ಬಂ ಸಾಂಗ್‌ನಲ್ಲಿ ಸ್ಟೆಪ್ ಹಾಕುವಂತೆ ಕೇಳಿದ್ದಾರೆ. ಇದಕ್ಕೆ ಹು ಎಂದ ರಶ್ಮಿಕಾ ಈಗಾಗಲೇ ಶೂಟಿಂಗ್‌ನಲ್ಲೂ ಬ್ಯುಸಿಯಾಗಿದ್ದಾರೆ. ಚಂಡೀಘಡ್‌ನಲ್ಲಿ ಈ ಆಲ್ಬಂನ್ ಶೂಟಿಂಗ್ ಅರ್ಧ ಮುಗಿದಿದ್ದು, ಇದರಲ್ಲಿ ರಶ್ಮಿಕಾ ಡಿಫ್ರೆಂಟ್ ಆಗಿ ಕಾಣಸಿಗಲಿದ್ದಾರಂತೆ.

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟಿಸುತ್ತಿರುವ ತೆಲುಗಿನ ಪುಷ್ಪ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಲಾಕ್‌ಡೌನ್ ಇಲ್ಲದಿದ್ದಿದ್ರೆ ಇಷ್ಟೊತ್ತಿಗೆ ಪುಷ್ಪ ಸಿನಿಮಾ ಶೂಟಿಂಗ್ ಮುಕ್ತಾಯಗೊಂಡಿರುತ್ತಿತ್ತು. ಆದ್ರೆ ಲಾಕ್‌ಡೌನ್‌ನಿಂದ ಇನ್ನು ಕೆಲ ಕೆಲಸಗಳು ಬಾಕಿ ಉಳಿದುಕೊಂಡಿದೆಯಂತೆ.

