ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಪತ್ನಿ ಪ್ರೇರಣಾ ಅಂದ್ರೆ ಅಚ್ಚುಮೆಚ್ಚು. ಯಾಕಂದ್ರೆ ಈ ಜೋಡಿ ಪರಸ್ಪರ ಪ್ರೀತಿಸಿ ಸಪ್ತಪದಿ ತುಳಿದ ಲವ್ ಬರ್ಡ್ಸ್. ಹೀಗಿರುವಾಗ ವಿಶೇಷ ದಿನಗಳು ಅಂದ್ರೆ ಅದನ್ನು ಮತ್ತಷ್ಟು ಸ್ಪೆಷಲ್ ಡೇ ಮಾಡೋದು ಕಾಮನ್. ಇಂದು ಧ್ರುವ ಸರ್ಜಾ ಪ್ರಿಯ ಮಡದಿ ಪ್ರೇರಣಾ ಶಂಕರ್ ಹುಟ್ಟುಹಬ್ಬ. ಈ ದಿನವನ್ನು ಆ್ಯಕ್ಷನ್ ಪ್ರಿನ್ಸ್ ಮತ್ತಷ್ಟು ಕಲರ್ ಫುಲ್ ಮಾಡಿದ್ದಾರೆ.

ಪತ್ನಿ ಹುಟ್ಟುಹಬ್ಬವನ್ನು ಸುಂದರವಾಗಿ ಸೆಲೆಬ್ರೆಶನ್ ಮಾಡಿದ ಧ್ರುವ
ಧ್ರುವ ಸರ್ಜಾ ಪತ್ನಿ ಪ್ರೇರಣಾ ಹುಟ್ಟುಹಬ್ಬವನ್ನು ಸುಂದರವಾಗಿ ಆಚರಿಸಿದ್ದಾರೆ. ಪತ್ನಿ ಹುಟ್ಟುಹಬ್ಬಕ್ಕಾಗಿ ಅದ್ಭುತ ಲೋಕವನ್ನು ಸೃಷ್ಟಿಸಿ ಪತ್ನಿಗೆ ಸರ್ ಪ್ರೈಸ್ ಕೊಟ್ಟಿದ್ದಾರೆ. ಕಡಲತೀರವೊಂದರಲ್ಲಿ ಇಳಿ ಸಂಜೆಯಲ್ಲಿ ಗೋಲ್ಡನ್ ಕಲರ್ ಥೀಮ್ ನಲ್ಲಿ ಶೃಂಗರಿಸಿ ವೈಟ್ ಅಂಡ್ ವೈಟ್ ಬಟ್ಟೆ ತೊಟ್ಟು ಆ ಸುಂದರ ಜಾಗದಲ್ಲಿ ಪತ್ನಿಗೆ ಕೇಕ್ ತಿನ್ನಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಜೊತೆಗೆ ಕಲರ್ ಫುಲ್ ಪಟಾಕಿಗಳನ್ನು ಹಾರಿಸಿ ಮಡದಿಗೆ ಖುಷಿ ಪಡಿಸಿದ್ದಾರೆ.