Bigg Boss Kannada Season 13: ಬಿಗ್‌ಬಾಸ್ ಸೀಸನ್ 13 ಶುರುವಾಗಿದ್ದು, ಮಾಲೆ ಪಡೆದ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಸೇರಿದ್ದಾರೆ. ಆದರೆ ಮಾಲೆ ಪಡೆಯದೇ, ಸೂಟ್‌ಕೇಸ್ ಕಳೆದುಕ“ಂಡಿರುವ ಅಭ್ಯರ್ಥಿಗಳು ಇನ್ನು ವಿಮಾನದಲ್ಲೇ ಇದ್ದಾರೆ. ಆದರೆ ಇವರೆಲ್ಲರಿಗೂ ಸ್ನಾನಕ್ಕಾಗಿ ಮಾತ್ರ ಬಿಗ್‌ಬಾಸ್ ಮನೆಗೆ ಹೋಗಲು ಅನುಮತಿ ನೀಡಲಾಗಿದೆ.
ಆದರೆ ಅದಕ್ಕೂ 1 ಕಂಡೀಷನ್ ಹಾಕಿರುವ ಬಿಗ್‌ಬಾಸ್ , ಎಲ್ಲ ಸ್ಪರ್ಧಿಗಳಿಗೂ ಸೇರಿ ಬರೀ 1ವರೆ ಗಂಟೆಯಲ್ಲಿ ಬಿಗ್‌ಬಾಸ್ ಮನೆಗೆ ಬಾತ್‌ರೂಮ್ ಬಳಸಿ, ಸ್ನಾನ ಮಾಡಿ ಬರಬೇಕು ಎಂದಿದ್ದಾರೆ. ಆದರೆ ಸ್ನಾನಕ್ಕೆ ಹೋಗಿದ್ದ ಕಿರಣ್ ಶಾಸ್ತ್ರಿ ಸ್ನಾನ ಮಾಡಲು ಹೋಗಿ ತೀರಾ ತಡವಾಗಿ ಬಂದಿದ್ದರಿಂದ ಕೋಪಗ“ಂಡ ವೈಷ್ಣವಿ, ಮತ್ತು ಮನೆಯವರು ಕಿರಣ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ವೈಷ್ಣವಿ ಮತ್ತು ಕಿರಣ್ ಮಧ್ಯೆ ಜಗಳ ನಡೆದಿದ್ದು, ಮಾತಿನ ಚಕಮಕಿ ಶುರುವಾಗಿತ್ತು. ವೈಷ್ಣವಿ ಕಿರಣ್ ತಡ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಅಷ್ಟು ಜೋರಾಗಿ ಯಾಕೆ ಕಿರುಚುತ್ತೀಯಾ ಅಂತಾ ಕಿರಣ್ ಏಕವಚನದಲ್ಲೇ ಮಾತನಾಡಿಸಿದ್ದು, ನನ್ನ ಬಾಯಿ, ನನ್ನಿಷ್ಟ ಎಷ್ಟು ಜೋರಾಗಿ ಬೇಕಾದ್ರೂ ಕಿರುಚುತ್ತೀನಿ. ಅದನ್ನೆಲ್ಲ ಕೇಳೋಕ್ಕೆ ನೀನ್ಯಾರು ಎಂದು ವೈಷ್ಣವಿ ಪ್ರಶ್ನಿಸಿದ್ದಾರೆ.
ಅಲ್ಲದೇ ಹುಚ್ಚಿ ಆಗಿದ್ದಿಯಾ ಎಂದು ಕೇಳಿದ ಕಿರಣ್ ಶಾಸ್ತ್ರಿಗೆ ನನ್ನನ್ನು ಹುಚ್ಚಿ ಅನ್ನೋಕ್ಕೆ ನೀನು ಯಾರು ಎಂದು ವೈಷ್ಣವಿ ಪ್ರಶ್ನಿಸಿದ್ದಾರೆ. ಅಲ್ಲದೇ ಮನೆಯವರೆಲ್ಲ ಕಿರಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮಾಡಿದ ತಪ್ಪಿಗೆ ಪಶ್ಚಾತಾಪವೇ ಇಲ್ಲದಂತೆ ಕಿರಣ್ ವರ್ತಿಸಿದ್ದ ರೀತಿಯನ್ನು ಎಲ್ಲರೂ ಖಂಡಿಸಿದ್ದಾರೆ.
ಇನ್ನು ಪ್ರಥಮಾ ಪ್ರಸಾದ್ ಕೂಡ ಕಿರಣ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದು, ಅವಿನಾಶ್ ಮತ್ತು ಪ್ರಥಮ ಬಗ್ಗೆ ಡಬಲ್ ಮೀನಿಂಗ್‌ನಲ್ಲಿ ಮಾತನಾಡಿದ ಕಿರಣ್‌ಗೆ ಕ್ಲಾಸ್ ತೆಗೆದುಕ“ಂಡಿದ್ದಾರೆ.
ನನಗೂ ಮದುವೆಯಾಗಿದೆ. ಅವಿನಾಶ್ ಅವರಿಗೂ ಮದುವೆಯಾಗಿದೆ. ನಮ್ಮ ಜೀವನ ಸಂಗಾತಿ ಆಚೆಯಿಂದ ಬಿಗ್‌ಬಾಸ್ ನೋಡ್ತಿರ್ತಾರೆ. ಅವರಿಗೆ ಹೇಗೆ ಅನ್ನಿಸುತ್ತೆ ಅನ್ನೋದನ್ನ ನೀವು ಯೋಚನೆ ಮಾಡ್ಬೇಕು. ಈ ಥರಾ ಎಲ್ಲಾ ಮಾತಾಡ್ಬಾರ್ದು ಎಂದಿದ್ದಾರೆ.




