ಗರುಡ ಪುರಾಣದಲ್ಲಿ ಪಾಪ ಪುಣ್ಯಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಹೇಳಲಾಗಿದೆ. ಅದೇ ರೀತಿ ಕೆಲವರ ಮನೆಯಲ್ಲಿ ಊಟ ಮಾಡಬಾರದೆಂದು ಕೂಡ ಹೇಳಲಾಗಿದೆ. ಹಾಗಾದ್ರೆ ಯಾರ ಮನೆಯಲ್ಲಿ ಊಟ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಕಳ್ಳಕಾಕರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ. ಯಾವುದಾದರೂ ವಸ್ತು ಅಥವಾ ದುಡ್ಡು ಕಳೆದುಕೊಂಡವರು ಬೇಸರಗೊಂಡಿರುತ್ತಾರೆ. ಅವರ ಶಾಪ ಕಳ್ಳರನ್ನ ತಟ್ಟದೇ ಬಿಡುವುದಿಲ್ಲ. ಹಾಗಾಗಿ ಅಂಥವರ ಮನೆಯಲ್ಲಿ ಊಟ ಮಾಡಿದರೆ, ಅದರ ಪಾಪ ನಮಗೂ ಸುತ್ತಿಕೊಳ್ಳುತ್ತದೆ. ಹಾಗಾಗಿ ಕಳ್ಳರ ಮನೆಯಲ್ಲಿ ಊಟ ಮಾಡಬಾರದು.
ಯಾವ ಮಹಿಳೆ ಅಧರ್ಮದ ದಾರಿಯಲ್ಲಿ ನಡೆಯುತ್ತಾಳೋ ಅಂಥವಳ ಮನೆಯಲ್ಲಿ ಊಟ ಮಾಡುವುದು ಮಹಾಪಾಪವೆಂದು ಹೇಳಲಾಗಿದೆ. ಯಾವ ಮಹಿಳೆ ನಿಯತ್ತಾಗಿ ದುಡಿಯದೇ, ಹಣಕ್ಕಾಗಿ ತಪ್ಪು ದಾರಿ ಹಿಡಿಯುವಳೋ ಅಂಥವಳ ಸಹವಾಸ ವಿಷಭರಿತ ಚೇಳಿನ ಸಹವಾಸಕ್ಕೆ ಸಮನಾಗಿದೆ.
ಇನ್ನು ಇತ್ತೀಚಿನ ದಿನಗಳಲ್ಲಿ ಮೋಸ ಮಾಡಿ ಹಣ ಗಳಿಸುವುದು, ಲಂಚ ಪಡೆದು ಜೀವನ ಮಾಡುವುದು ಇತ್ಯಾದಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಂಥವರ ಗೆಳೆತನ ಮಾಡಿದರೆ, ಅಂಥವರ ಮನೆಯಲ್ಲಿ ಊಟ ಮಾಡಿದರೆ ನಮಗೆ ಪಾಪ ತಗುಲುವುದು ಖಚಿತ. ಹಾಗಾಗಿ ವಂಚಕರ, ಲಂಚಬಾಕರ ಮನೆಯಲ್ಲಿ ಊಟ ಮಾಡಬಾರದು.
ಮಂಗಳಮುಖಿಯರಿಗೆ ಆಹಾರ, ದುಡ್ಡು ದಾನ ಮಾಡುವುದು ಪುಣ್ಯದ ಕೆಲಸವಾಗಿದೆ. ಆದರೆ, ಅವರಿಂದ ಆಹಾರವನ್ನು ತೆಗೆದುಕೊಳ್ಳಬಾರದು. ಯಾಕಂದ್ರೆ ಅವರಿಗೆ ಹಲವರು ದಾನ ಮಾಡಿರುತ್ತಾರೆ. ಅವರಲ್ಲಿ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಹಾಗಾಗಿ ಮಂಗಳಮುಖಿಯರಿಂದ ಆಹಾರ ತೆಗೆದುಕೊಳ್ಳಬಾರದು.





