ಮದುವೆ ವೇಳೆ ಸಪ್ತಪದಿಯನ್ನೇಕೆ ತುಳಿಯುತ್ತಾರೆ..? ಇದರ ಮಹತ್ವವೇನು..?

ಮದುವೆ ಅಂದ್ರೆ ಬರೀ ಎರಡು ದೇಹಗಳ ಸಂಬಂಧವಲ್ಲ. ಎರಡು ಕುಟುಂಬ ಒಂದುಗೂಡೋ ಸಮಯ. ದಂಪತಿಗಳು ದಾಂಪತ್ಯ ಜೀವನವನ್ನ ಉತ್ತಮವಾಗಿ ನಡೆಸಿದರೆ, ಎರಡು ಕುಟುಂಬಗಳು ನೆಮ್ಮದಿಯಾಗಿರುತ್ತದೆ. ಹೀಗೆ ದಾಂಪತ್ಯ ಜೀವನ ಉತ್ತಮವಾಗಿರಬೇಕು ಅಂದ್ರೆ ಪದ್ಧತಿ ಪ್ರಕಾರವಾಗಿ ಮದುವೆ ಮಾಡಬೇಕು. ಅಂಥ ಪದ್ಧತಿಯಲ್ಲಿ ಸಪ್ತಪದಿ ಕೂಡ ಒಂದು. ಆ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ…

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಸಪ್ತಪದಿ ಅಂದ್ರೆ ಸತಿ ಪತಿ ಕೈ ಹಿಡಿದು 7 ಹೆಜ್ಜೆ ಹಾಕೋದು. ಈ 7 ಹೆಜ್ಜೆ 7 ಜನ್ಮವನ್ನ ಸೂಚಿಸುತ್ತದೆ. 7 ಹೆಜ್ಜೆ ಇಡುವಾಗ 7 ಪ್ರತಿಜ್ಞೆ ಮಾಡಲಾಗುತ್ತದೆ. ಮೊದಲ ಹೆಜ್ಜೆಯ ವೇಳೆ ವರನು ವಧುವಿಗೆ ಜೀವನಪೂರ್ತಿ ಸುಖ ದುಃಖದಲ್ಲಿ ನಿನ್ನೊಂದಿಗೆ ನಾನು ಇರುತ್ತೇನೆ. ಕುಟುಂಬವನ್ನು ಪ್ರೀತಿ ಕಾಳಜಿಯಿಂದ ಕಾಣುತ್ತೇನೆಂದು ಪ್ರತಿಜ್ಞೆ ಮಾಡುತ್ತಾನೆ.

ಸಪ್ತಪದಿಯ ಎರಡನೇ ಹೆಜ್ಜೆಯಲ್ಲಿ ವರನು ವಧುವಿಗೆ ನಾನು ಜೀವನಪೂರ್ತಿ ನಿನ್ನ ನಂಬಿಕೆ ಅರ್ಹನಾಗಿ, ನಿಷ್ಠಾವಂತನಾಗಿ ಜೀವನ ನಡೆಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಅದೇ ರೀತಿ ವಧು ಕೂಡ ಸುಖದಲ್ಲಿ ನಿನ್ನ ಜೊತೆಯಿದ್ದು, ಕಷ್ಟಕಾಲದಲ್ಲಿ ನಿನಗೆ ಧೈರ್ಯ ನೀಡಿ, ಜವಾಬ್ದಾರಿಗಳನ್ನ ಹಂಚಿಕೊಳ್ಳುತ್ತೇನೆಂದು ಪ್ರತಿಜ್ಞೆ ಮಾಡುತ್ತಾಳೆ.

ಇನ್ನು ಮೂರನೇ ಹೆಜ್ಜೆಯಲ್ಲಿ ವರನು ವಧುವಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಪಡೆದು, ಮಕ್ಕಳಿಗೆ ಉತ್ತಮ ಶಿಕ್ಷಣ, ಮತ್ತು ಕುಟುಂಬಸ್ಥರಿಗೆ ನೆಮ್ಮದಿಯ ಜೀವನ ನೀಡಲು ಪ್ರಯತ್ನಿಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಮತ್ತು ವಧು ಜೀವನ ಪೂರ್ತಿ ನಿಷ್ಠೆಯಿಂದ ಜೀವನ ನಡೆಸುತ್ತೇನೆ. ನೀವು ದುಡಿದ ಸಂಪತ್ತನ್ನು ಜವಾಬ್ದಾರಿಯಿಂದ ನೋಡಿಕೊಳ್ಳುತ್ತೇನೆಂದು ಪ್ರತಿಜ್ಞೆ ಮಾಡುತ್ತಾಳೆ.

ನಾಲ್ಕನೇ ಹೆಜ್ಜೆಯಲ್ಲಿ ನನ್ನ ಜೀವನದಲ್ಲಿ ಬಂದು ಜೀವನವನ್ನು ಸುಂದರಗೊಳಿಸಿದ್ದಕ್ಕೆ ಧನ್ಯವಾದ ಎಂದು ವರ ವಧುವಿಗೆ ಹೇಳುತ್ತಾನೆ. ಅಲ್ಲದೇ ವಧುವಿನ ಕುಟುಂಬವನ್ನು ಗೌರವದಿಂದ ಕಾಣುತ್ತೇನೆಂದು ಹೇಳುತ್ತಾನೆ. ಇನ್ನು ವಧು ನಾಲ್ಕನೇ ಹೆಜ್ಜೆಯಲ್ಲಿ ಪತಿಯ ಎಲ್ಲ ನಿರ್ಧಾರಗಳಿಗೂ ಕೈ ಜೋಡಿಸುತ್ತೇನೆಂದು ಹೇಳುತ್ತಾಳೆ.

ಐದನೇ ಹೆಜ್ಜೆಯಲ್ಲಿ ವಧು ವರ ಇಬ್ಬರೂ ಸೇರಿ ದೇವರಲ್ಲಿ ಆರೋಗ್ಯವಾಗಿ, ಸುಖವಾಗಿ ಜೀವನ ಪೂರ್ತಿ ಖುಷಿ ಖುಷಿಯಾಗಿರುವಂತೆ ದೇವರಲ್ಲಿ ಕೇಳಿಕೊಳ್ಳುತ್ತಾನೆ.

ಆರನೇ ಹೆಜ್ಜೆಯಲ್ಲಿ ಜೀವನದಲ್ಲಿ ಎಂಥದ್ದೇ ಕಷ್ಟ ಬಂದರೂ ಸುಖ ದುಃಖದಲ್ಲಿ ಸಮನಾಗಿ ಸಾಥ್ ನೀಡಿ, ಎಂಥದ್ದೇ ಕಠಿಣ ಪರಿಸ್ಥಿತಿಯಲ್ಲೂ ಜೊತೆಯಾಗಿರುತ್ತೇವೆಂದು ಪ್ರತಿಜ್ಞೆ ಮಾಡುತ್ತಾರೆ.

ಏಳನೇ ಹೆಜ್ಜೆಯಲ್ಲಿ ಈ ಮೇಲಿಯ ಎಲ್ಲಾ ಮಾತನ್ನು ಪಾಲಿಸುತ್ತೇವೆ. ಎರಡು ಕುಟುಂಬಗಳನ್ನು ಸಮನಾಗಿ ನೋಡುತ್ತೇನೆ. ಯಾವುದೇ ಪರಿಸ್ಥಿತಿಯಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾರೆವು ಎಂದು ಪ್ರತಿಜ್ಞೆ ಮಾಡುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author