ನವರಸ ನಾಯಕ ಜಗ್ಗೇಶ್ ರಾಯರ ಭಕ್ತರು ಅನ್ನೋದು ಗೊತ್ತೇ ಇದೆ. ಸಹಜವಾಗಿ ಹುಟ್ಟುಹಬ್ಬ ಹಾಗೂ ಮತ್ತಿತರ ವಿಶೇಷ ಸಂದರ್ಭದಲ್ಲಿ ಮಂತ್ರಾಲಯಕ್ಕೆ ಭೇಟಿ ಕೊಡ್ತಾರೆ. ಅದರಂತೆ ಹೊಸ ವರ್ಷದ ಮೊದಲ ದಿನವಾದ ಇಂದು ಜಗ್ಗೇಶ್ ರಾಯರ ದರ್ಶನ ಪಡೆದು ವರ್ಷದ ಮೊದಲ ದಿನವನ್ನು ಬರ ಮಾಡಿಕೊಂಡಿದ್ದಾರೆ.
ಈ ಫೋಟೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ವರ್ಷದ ಮೊದಲದಿನ ರಾಯರ ಮಠದಲ್ಲಿ ಕಳೆದ ಕ್ಷಣ..ಗುರುಭ್ಯೋನಮಃ..ಶುಭಮಸ್ತು.. ಸಂತಸ ಹಂಚಿಕೊಂಡಿದ್ದಾರೆ.
ಇನ್ನೂ, ಮಂತ್ರಾಯಲಯಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಆಂಧ್ರ ಪ್ರದೇಶದ ಹೋಟೆಲ್ವೊಂದಕ್ಕೆ ಜಗ್ಗೇಶ್ ಭೇಟಿ ನೀಡಿದ್ದಾರೆ. ಈ ವೇಳೆ ಅಭಿಮಾನಿಗಳೊಂದಿಗೆ ಫೋಟೋಗೆ ಫೋಸ್ ಕೊಟ್ಟಿದ್ದಾರೆ.





