ಕಿಚ್ಚ ಸುದೀಪ್ ಭಕ್ತಗಣ ಅಷ್ಟೇ ಅಲ್ಲ ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆಪಡುವ ಸೂಪರ್ ನ್ಯೂಸ್ ವೊಂದು ಫ್ಯಾಂಟಮ್ ಅಡ್ಡದಿಂದ ರಿವೀಲ್ ಆಗಿದೆ. ಫ್ಯಾಂಟಮ್ ಎಂದು ಓಂಕಾರ ಬರೆದಿದ್ದ ನಿರ್ದೇಶಕ ಅನುಪ್ ಭಂಡಾರಿ ಸಿನಿಮಾದ ಟೈಟಲ್ ಬದಲಿಸುವುದರೊಂದಿಗೆ ಕಿಚ್ಚನ ಅಭಿಮಾನಿಗಳಿಗೆ ಸ್ಪೆಷಲ್ ನ್ಯೂಸ್ ಕೊಟ್ಟಿದ್ದಾರೆ.
ಬುರ್ಜ್ ಖಲೀಫ್ ಕಟ್ಟಡದ ಮೇಲೆ ‘ವಿಕ್ರಾಂತ್ ರೋಣ’ ಟೈಟಲ್ ಲಾಂಚ್
ಕಿಚ್ಚ ಸುದೀಪ್ ನಟಿಸ್ತಿದ್ದ ಫ್ಯಾಂಟಮ್ ಸಿನಿಮಾ ಹೆಸ್ರನ್ನು ವಿಕ್ರಾಂತ್ ರೋಣ ಅಂತಾ ಬದಲಾಗಿಸಲಾಗಿದೆ. ಈ ವಿಕ್ರಾಂತ ರೋಣ ಟೈಟಲ್ ಬದಲಾವಣೆಗೆ ಫ್ಯಾಂಟಮ್ ಸಿನಿತಂಡ ಆಯ್ಕೆ ಮಾಡಿಕೊಂಡಿರೋದು ವಿಶ್ವದ ಅತಿ ಎತ್ತರದ ಕಟ್ಟಡವನ್ನು. ಯಸ್, ಬುರ್ಜ್ ಖಲೀಫಾ ಕಟ್ಟಡದ ಮೇಲೆ ಕಿಚ್ಚ ವಿಕ್ರಾಂತ್ ರೋಣನಾಗಿ ರಾರಾಜಿಸಲಿದ್ದಾರೆ. ಇದೇ ತಿಂಗಳ 31ರಂದು ಬುರ್ಜ್ ಖಲೀಫಾ ಕಟ್ಟದ ಮೇಲೆ ವಿಕ್ರಾಂತ್ ರೋಣ ಟೈಟಲ್ ಲೋಗೋದೊಂದಿಗೆ 180 ಸೆಕೆಂಡ್ ಗಳ ವಿಡಿಯೋ ಝಲಕ್ ನ್ನು ಫ್ಯಾಂಟಮ್ ಸಿನಿಬಳಗ ರಿಲೀಸ್ ಮಾಡಲಿದೆ.
ಫರ್ ದ ಪಸ್ಟ್ ಟೈಮ್ ಇಂತಹ ಸಾಹಸಕ್ಕೆ ಕೈ ಹಾಕಿರೋ ಫ್ಯಾಂಟಮ್ ಚಿತ್ರತಂಡಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಅಷ್ಟೇ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ಯಾವ ಸ್ಟಾರ್ ಹೀರೋಗೆ ಸಿಗದ ಅವಕಾಶ ಕಿಚ್ಚನಿಗೆ ಸಿಕ್ಕಿದ್ದು, ಭುರ್ಜ್ ಖಲೀಫಾ ಕಟ್ಟಡ ಮೇಲೆ ಕನ್ನಡದ ಆರಡಿ ಕಟೌಟ್ ಸುದೀಪ್ ವಿಕ್ರಾಂತ್ ರೋಣನಾಗಿ ಮಿಂಚಲಿದ್ದಾರೆ. ಈ ಎಕ್ಸೈಟ್ ನ್ಯೂಸ್ ಕೇಳಿ ಕಿಚ್ಚ ಭಕ್ತಗಣ ಸಖತ್ ಥ್ರಿಲ್ ಆಗಿದ್ದು, ಜನವರಿ 31 ಅದಷ್ಟು ಬೇಗ ಬರಲಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ.