- Advertisement -
ಬಾಲಿವುಡ್ ನಟ ವರುಣ್ ಧವನ್ ಬಾಲ್ಯದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಹಾರಾಷ್ಟ್ರದ ಅಲಿಬಾಗ್ ನಲ್ಲಿರುವ ಐಷಾರಾಮಿ ಹೋಟೆಲ್ ನಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯ ನೆರವೇರಿದೆ. ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ವಿವಾಹ ಮಹೋತ್ಸವದಲ್ಲಿ ವರುಣ್ ನತಾಶಾ ದಲಾಲ್ ಜೊತೆ ಹೊಸ ಬಾಳಿಗೆ ಹೆಜ್ಜೆ ಹಾಕಿದ್ದಾರೆ.

ಕೇವಲ 200 ಜನರ ಸಮ್ಮುಖದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ವರುಣ್-ನತಾಶಾ ಜೋಡಿ ಬಿಳಿ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸಿದ್ರು. ವರುಣ್ ಬಿಳಿ ಬಣ್ಣದ ಶೇರ್ವಾನಿ ಧರಿಸಿದ್ರೆ, ನತಾಶಾ ಕೂಡ ಬಿಳಿ ಬಣ್ಣದ ಎಂಬ್ರಾಯಿಡರಿ ವರ್ಕ್ ಲೆಹೆಂಗಾ ತೊಟ್ಟು ಮಿಂಚಿದ್ರು. ಅಂದಹಾಗೇ ನತಾಶಾ ವರುಣ್ ಧವನ್ ಬಾಲ್ಯದ ಗೆಳತಿಯಾಗಿದ್ದು, ಸದ್ಯ ಫ್ಯಾಷನ್ ಡಿಸೈನಿಂಗ್ ಕೆಲಸಲ್ಲಿ ತೊಡಗಿಸಿಕೊಂಡಿದ್ದಾರೆ.

- Advertisement -